ಹೊಸದಿಗಂತ ವರದಿ, ಚಿಕ್ಕೋಡಿ:
ಹುಕ್ಕೇರಿ- ವಾರ್ಡ್ ಗಳಲ್ಲಿ ಸಾರ್ವಜನಿಕರಿಗೆ ಚರಂಡಿ ಹಾಗೂ ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆ ಆಗದಂತೆ ನೊಡಿಕೊಳ್ಳಲು ಪುರರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಕರ್ತವ್ಯಲೋಪ ಕೇಳಿ ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಉಮೇಶ ಕತ್ತಿ ಎಚ್ಚರಿಕೆ ನೀಡಿದರು
ಸಂಕೇಶ್ವರ ಹಾಗೂ ಹುಕ್ಕೇರಿ ಪುರಸಭೆ ವಾರ್ಡ್ ಗಳಲ್ಲಿ ಅಧಿಕಾರಿಗಳ ನಡೆಸಿದ ಕುಂದುಕೊರತೆಗಳನ್ನು ಸಚಿವ ಹಾಗೂ ಸ್ಥಳೀಯ ಶಾಸಕ ಉಮೇಶ ಕತ್ತಿ ಅವರು ಪರಿಶೀಲಿಸಿದರು.
ಪಟ್ಟಣದ ತಾಲೂಕು ಪಂಚಾಯತ ಸಭಾ ಭವನದಲ್ಲಿ ಆಝಾದಿಕಾ ಅಮೃತ ಮಹೋತ್ಸವದ ಪ್ರತಿ ಪುರಸಭೆಗೆ ಹಿನ್ನಲೆಯಲ್ಲಿ 1೦ ಕೋಟಿ ಹಾಗೂ ನಗರೋತ್ಥಾನ ಯೋಜನೆಯಡಿ 2 ಕೋಟಿ ಸೇರಿ ಒಟ್ಟು 12 ಕೋಟಿ ರೂಪಾಯಿ ಸರಕಾರದಿಂದ ಪ್ರತಿ ಪುರಭೆಗಳಿಗೆ ಮಂಜುರಾದ ಹಿನ್ನಲೆ ಕೆಲವು ದಿನಗಳ ಹಿಂದೆ ಸಚಿವರು ಸಂಕೇಶ್ವರ ಹಾಗೂ ಹುಕ್ಕೇರಿ ಪುರಸಭೆ ವ್ಯಾಪ್ತಿಯ ವಾರ್ಡ್ ಮಟ್ಟದ ಕುಂದುಕೊರತೆಗಳ ಸಭೆ ನಡೆಸಲು ನಿರ್ದೇಶನ ನೀಡಿದ್ದರು. ಸಚಿವರ ನಿರ್ದೇಶನದಂತೆ ಅಧಿಕಾರಿಗಳು ಹಾಗೂ ಪುರಸಭೆ ಅಧ್ಯಕ್ಷರು ಸದಸ್ಯರು, ಸಭೆ ನಡೆಸಿ ವಾರ್ಡ್ ಗಳಲ್ಲಿ ಆಗಬೇಕಾದ ಮೂಲಭೂತ ಕಾಮಗಾರಿಗಳ ಪಟ್ಟಿ ಮಾಡಿ ಸಭೆಗೆ ಹಾಜರು ಪಡಿಸಿದರು.
ತಹಶಿಲ್ದಾರ ಡಾ. ಡಿ. ಎಚ್. ಹೂಗಾರ ವಾಡ್೯ ಗಳಲ್ಲಿ ಆಗಬೇಕಾದ ಕಾಮಗಾರಿಗಳನ್ನು ಸಚಿವ ಉಮೇಶ ಕತ್ತಿ ಅವರಿಗೆ ಸಭೆಯಲ್ಲಿ ತಿಳಿಸಿದರು. ಈ ಸಂಧರ್ಭದಲ್ಲಿ ಹುಕ್ಕೇರಿ ಪುರಸಭೆ ಅಧ್ಯಕ್ಷ ಎ ಕೆ ಪಾಟೀಲ, ಸಂಕೇಶ್ವರ ಪುರಸಭೆ ಉಪಾಧ್ಯಾಕ್ಷ ಅಜೀತ ಕರಜಗಿ, ತಾಲೂಕಾ ಅಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.