Friday, October 7, 2022

Latest Posts

ಸ್ವಾತಂತ್ರ್ಯ ಹೋರಾಟಗಾರ ವೆಂಕಣ್ಣ ಬೊಮ್ಮಣ್ಣ ನಾಯಕ ಮನೆಗೆ ಸಚಿವ ಕೋಟ ಭೇಟಿ

ಹೊಸದಿಗಂತ ವರದಿ,ಅಂಕೋಲಾ:

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅಂಕೋಲಾ ತಾಲೂಕಿನ ಬಾಸಗೋಡ ಸೂರ್ವೆಯ ಸ್ವಾತಂತ್ರ್ಯ ಹೋರಾಟಗಾರ ವೆಂಕಣ್ಣ ಬೊಮ್ಮಣ್ಣ ನಾಯಕ ಅವರ ಮನೆಗೆ ಭೇಟಿ ನೀಡಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟದ ತಾಯಿ ನೆಲ ಅಂಕೋಲಾದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ ಅಪ್ರತಿಮ,ಸ್ವಾತಂತ್ರ್ಯ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡ ಮಹಾನ್ ವ್ಯಕ್ತಿಗೆ ಭೇಟಿ ಮಾಡುವ ಅವಕಾಶ ದೊರಕಿರುವುದು ಪರಮ ಭಾಗ್ಯ ಎಂದರು.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಹರ ಘರ್ ತಿರಂಗಾ ಕಾರ್ಯಕ್ರಮಕ್ಕೆ ಜಿಲ್ಲೆಯ ಜನ ಅತ್ಯಂತ ಭಕ್ತಿಯಿಂದ ಸ್ಪಂದಿಸಿದ್ದಾರೆ ಎಂದ ಅವರು ಹಿರಿಯ ಯೋಧರ ಹೋರಾಟ ಇಂದಿನ ಪೀಳಿಗೆಗೆ ಮಾದರಿಯಾಗಲಿ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಪ್ರಮುಖರುಗಳಾದ ವಿನಾಯಕ ಪಡ್ತಿ, ನಿತ್ಯಾನಂದ ಗಾಂವಕರ್, ಬಿಂದೇಶ ಹಿಚ್ಕಡ, ವೆಂಕಣ್ಣ ನಾಯಕ ಅವರ ಧರ್ಮಪತ್ನಿ ಮತ್ತು ಬಂಧುಗಳು ಉಪಸ್ಥಿತರಿದ್ದರು.
ರಾಜೇಶ ನಾಯಕ ಸೂರ್ವೆ ಸ್ವಾಗತಿಸಿ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!