ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆ ಒಂದಲ್ಲ ಒಂದು ಗೊಂದಲದಿಂದಗೂಡಿದ್ದು, ಇದೀಗ ಮಕ್ಕಳು ತೆರಿಗೆ ಪಾವತಿ ಮಾಡಿದರೂ ಆ ಕುಟುಂಬಕ್ಕೆ ಅಥವಾ ತಾಯಿಗೆ 2000 ರೂಪಾಯಿ ಸಿಗುವುದಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಇದೀಗ ಈ ಹೇಳಿಕೆಯಿಂದ ಜನರು ಸಾಕಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ.ಒಂದರ ಮೇಲೊಂದು ಗ್ಯಾರಂಟಿ ವಿಧಿಸುತ್ತಿರುವ ಸರ್ಕಾರವು ಮಾರ್ಗಸೂಚಿಯಲ್ಲಿ ಇಲ್ಲದ ಹೊಸದೊಂದು ಕಂಡಿಷನ್ ಸೇರ್ಪಡೆ ಮುಂದಾಗಿದೆಯಾ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಪತಿ, ಪತ್ನಿ ಇಬ್ಬರಲ್ಲಿ ಯಾರಾದರೂ ಒಬ್ಬರು ತೆರಿಗೆ ಪಾವತಿ ಮಾಡುತ್ತಿದ್ದರೆ ಈ ಯೋಜನೆ ಅನ್ವಯ ಇಲ್ಲ ಅಂತ ಸರ್ಕಾರವು ಆದೇಶ ಹೊರಡಿಸಿತ್ತು. ಒಟ್ಟಿನಲ್ಲಿ, ತೆರಿಗೆ ಪಾವತಿದಾರರಿಗೆ ಈ ಯೋಜನೆಯು ಸಿಗುವುದಿಲ್ಲ ಎಂದು ಜನಸಾಮಾನ್ಯರು ಆರೋಪ ಮಾಡುತ್ತಿದ್ದು, ಕಾಂಗ್ರೆಸ್ ನೀಡಿದ 5 ಗ್ಯಾರಂಟಿಗಳ ಮಧ್ಯೆ ಗೃಹಲಕ್ಷ್ಮೀ ಯೋಜನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.