ಅಂತೂ ಕೇರಳಕ್ಕೆ ಮುಂಗಾರು ಪ್ರವೇಶ: ಎಲ್ಲೆಡೆ ಉತ್ತಮ ಮಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಂತೂ ಕೊನೆಗೂ ಕೇರಳಕ್ಕೆ ಮುಂಗಾರು ಪ್ರವೇಶಪಡೆದುಕೊಂಡಿದೆ. ಗುರುವಾರ ರಾಜ್ಯದ ಶೇ.95ರಷ್ಟು ಪ್ರದೇಶಗಳಲ್ಲಿ ಮಳೆಯಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡಿಗೆ ಮುಂಗಾರು ಆಗಮಿಸಲಿದೆ.

ಮುಂದಿನ ವಾರ ಮಾನ್ಸೂನ್‌ ಮಾರುತಗಳು ಉತ್ತರ ಭಾರತ ತಲುಪಲಿದೆ. ಮಾನ್ಸೂನ್ ಸಾಮಾನ್ಯವಾಗಿ ಜೂನ್ 1 ರ ಹೊತ್ತಿಗೆ ದೇಶಕ್ಕೆ ಪ್ರವೇಶ ಪಡೆಯುತ್ತದೆ. ಆದರೆ, ಈ ಬಾರಿ ಜೂನ್‌ 4 ರಂದು ಮಾನ್ಸೂನ್‌ ಕೇರಳವನ್ನು ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳೀತ್ತು. ಆದರೆ, ಅರಬ್ಬಿ ಸಮುದ್ರದಲ್ಲಿ ಉಂಟಾರ ಬೀಪರ್‌ಜಾಯ್‌ ಚಂಡಮಾರುತವು ಮಾನ್ಸೂನ್‌ ಮಾರುತದ ಮಾರ್ಗವನ್ನು ನಿರ್ಬಂಧ ಮಾಡಿತ್ತು. ಆದರೆ, ಬೀಪರ್‌ಜಾಯ್‌ ಚಂಡಮಾರುತವೀಗ ಪಥ ಬದಲಾವಣೆ ಮಾಡಿದ್ದು, ಈಗ ಮಾತಿಸ್ತಾನದತ್ತ ಸಾಗಿದೆ. ಇದರಿಂದಾಗಿ ಕೇರಳದ ಕಡೆಗೆ ಮಾನ್ಸೂನ್‌ ಮಾರುತಗಳು ತಿರುಗಿವೆ. ಕೇರಳದ ಕೊಚ್ಚಿಯಲ್ಲಿ ಗುರುವಾರ ಭಾರೀ ಮಳೆಯಾಗಿದ್ದು, ತಾಪಮಾನದಲ್ಲೂ ದೊಡ್ಡ ಪ್ರಮಾಣದ ಇಳಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ ವ್ಯಾಪಕ ಮಳೆಯಾಗಿದೆ. ಪರಿಸ್ಥಿತಿಗಳನ್ನು ಪರಿಗಣಿಸಿ, ನೈಋತ್ಯ ಮಾನ್ಸೂನ್ ಕೇರಳದ ಮೇಲೆ ಪ್ರಾರಂಭವಾಗಿದೆ ಐಎಂಡಿ ಹೇಳಿಕೆಯಲ್ಲಿ ತಿಳಿಸಿದೆ.

ಮುಂದಿನ 48 ಗಂಟೆಗಳಲ್ಲಿ ಮಧ್ಯ ಅರೇಬಿಯನ್ ಸಮುದ್ರ, ತಮಿಳುನಾಡು, ಕರ್ನಾಟಕ, ಮತ್ತು ನೈಋತ್ಯ, ಮಧ್ಯ, ಈಶಾನ್ಯ ಬಂಗಾಳ ಕೊಲ್ಲಿ, ಈಶಾನ್ಯ ರಾಜ್ಯಗಳು ಮತ್ತು ಕೇರಳದ ಉಳಿದ ಭಾಗಗಳಲ್ಲಿ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಐಎಂಡಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!