Saturday, October 1, 2022

Latest Posts

ದೇಶದ ಮೊದಲ ಸ್ಟಾರ್ಟ್-ಅಪ್ ಬ್ಯಾಂಕ್ ಶಾಖೆ ಉದ್ಘಾಟಿಸಿದ ಸಚಿವ ಮುರುಗೇಶ್ ನಿರಾಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ರಾಜಧಾನಿ ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಗಳಿಗೆಂದೇ ನೂತನವಾಗಿ ಆರಂಭಿಸಲಾಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವಿಶೇಷ ಶಾಖೆಯನ್ನು ಮಂಗಳವಾರ ಸಚಿವ ಡಾ.ಮುರುಗೇಶ್ ನಿರಾಣಿ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಚಿವರು, ನಮ್ಮ ಯುವ ಜನಾಂಗದ ಸದೃಢತೆಗೆ ಹಾಗೂ ಅವರು ಆರ್ಥಿಕವಾಗಿ ಬೆಳವಣೆಗೆ ಸಾಧಿಸಲು ನೆರವು ನೀಡುವ ಉದ್ದೇಶದಿಂದ ಬ್ಯಾಂಕ್ ವಿನೂತನ ಯೋಜನೆಗಳನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಕರ್ನಾಟಕದ 3ನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ರಾಜ್ಯದಾದ್ಯಂತ 1.50 ಟ್ರಿಲಿಯನ್  ವ್ಯವಹಾರ ನಡೆಸುತ್ತಿರುವ ಹೆಗ್ಗಳಿಕೆಯನ್ನು ಹೊತ್ತಿದೆ. 749 ಶಾಖೆಗಳನ್ನು ಹೊಂದಿರುವ ವಿಶಾಲ ಉದ್ದಿಮೆಯಿದು ಎಂದರು. ಯೂನಿಯನ್ ಬ್ಯಾಂಕ್ ದೇಶದಲ್ಲೇ ಮೊದಲ ಸ್ಟಾರ್ಟ್-ಅಪ್ ಶಾಖೆಯನ್ನು ರಾಜ್ಯದಲ್ಲಿ ಪ್ರಾರಂಭಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಸಂತಸ ಹಂಚಿಕೊಂಡರು.
ಚಿಲ್ಲರೆ, ಎಂಎಸ್‌ಎಂಇ ಮತ್ತು ಚಿನ್ನದ ಸಾಲ ವಿಭಾಗದ ಅಡಿಯಲ್ಲಿ ಸಾಲವನ್ನು ಮಂಜೂರು ಮಾಡಲು ವಿಶೇಷ ಶಾಖೆಗಳು ಮತ್ತು ಸಂಸ್ಕರಣಾ ಕೇಂದ್ರಗಳನ್ನು ಬ್ಯಾಂಕ್ ಸ್ಥಾಪಿಸಿದ್ದು, ಈ ಮೂಲಕ ಲಕ್ಷಾಂತರ ಜನರು ತಮ್ಮ ಜೀವನವನ್ನು ಸೃಷ್ಟಿಸಿಕೊಂಡಿದ್ದಾರೆ ಎಂದರು. ಈ ವೇಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಅಲೋಕ್ ಕುಮಾರ್, ಬ್ಯಾಂಕ್ ನ ಇತರೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!