ಪ್ರಾನ್ಸ್‌ ನಲ್ಲಿ ಜಾಗತಿಕ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಮಾಡಿ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಿದ ಸಚಿವ ನಿರಾಣಿ ನಿಯೋಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾಜ್ಯಕ್ಕೆ ವಿದೇಶಿ ಬಂಡವಾಳವನ್ನು ಆಕರ್ಷಿಸಲು 7 ದಿನಗಳ ಯೂರೋಪ್‌ ಪ್ರವಾಸದಲ್ಲಿರುವ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ ಆರ್‌. ನಿರಾಣಿ ನೇತೃತ್ವದ ನಿಯೋಗ, ಫ್ರಾನ್ಸ್‌ನ ಪ್ಯಾರಿಸ್ ನಗರದಲ್ಲಿ ವಿವಿಧ ಜಾಗತಿಕ ಸಂಸ್ಥೆಗಳ ಪ್ರಮುಖರನ್ನು ಬೇಟಿ ಮಾಡಿ ಚರ್ಚೆ ನಡೆಸಿತು.
ಅಲಸ್ಟಾಮ್ ಇಂಜಿನಿಯರಿಂಗ್ ಕಂಪನಿಯ ಉಪಾಧ್ಯಕ್ಷ ಫ್ಯೂರಿ ಪಿಯರ್‌ ಅವರನ್ನು ಭೇಟಿ ಮಾಡಿದ ನಿಯೋಗ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಕುರಿತು ಮನವರಿಕೆ ಮಾಡಿಕೊಟ್ಟಿತು. ಹಾಗೂ, ನವೆಂಬರ್‌ 2-4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಔಪಚಾರಿಕ ಆಹ್ವಾನ ನೀಡಲಾಯಿತು. ಅಲಸ್ಟಾಮ್ ಇಂಜನಿಯರಿಂಗ್ ಕಂಪನಿಯು ಫ್ರಾನ್ಸ್‌ನಲ್ಲಿ ಚಲನಶೀಲತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಫ್ರಾನ್ಸ್‌ನಾದ್ಯಂತ 16 ಸೈಟ್‌ಗಳೊಂದಿಗೆ, ಸ್ಥಳೀಯ ಆರ್ಥಿಕತೆಯ ಚೈತನ್ಯಕ್ಕೆ ಅಗಾಧ ಕೊಡುಗೆ ನೀಡುತ್ತಿದೆ.
ಬಳಿಕ ಸಚಿವ ನಿರಾಣಿ ಅವರು ಸೆಂಟ್‌ ಗೋಬೈನ್‌ನ ಸಿಎಫ್‌ಒ ಎನ್‌ ಶ್ರೀಧರ್‌ ಅವರನ್ನು ಪ್ಯಾರಿಸ್‌ನಲ್ಲಿ ಭೇಟಿಯಾದರು. ದೇವನಹಳ್ಳಿಯಲ್ಲಿರುವ ಕಂಪನಿಯ ಉತ್ಪಾದನಾ ಘಟಕದ ವಿಸ್ತರಣೆಗೆ ಇರುವ ಅವಕಾಶಗಳ ಕುರಿತು ಸಚಿವರ ಜತೆ ಅವರು ಚರ್ಚಿಸಿದರು. ನವೆಂಬರ್ 2 ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಭೆಗೆ ಶ್ರೀಧರ್‌ ಅವರನ್ನು ಸಚಿವರು ಔಪಚಾರಿಕವಾಗಿ ಆಹ್ವಾನಿಸಿದರು. ನಿಯೋಗವು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಡಾ. ಇ.ವಿ ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್‌ ಕೃಷ್ಣ ಅವರನ್ನೊಳಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!