ಬಸ್ ಅಪಘಾತದಲ್ಲಿ ಮೃತ ವಿದ್ಯಾಥಿಗಳ ಕುಟುಂಬಗಳಿಗೆ ಪರಿಹಾರ ಚೆಕ್ ವಿತರಿಸಿದ ಸಚಿವ ಪಾಟೀಲ್

ಹೊಸದಿಗಂತ ವರದಿ, ರಾಯಚೂರು:

ಬಸ್ ಅಪಘಾತದಲ್ಲಿ ಮೃತಪಟ್ಟ ಶಾಲಾ ಬಾಲಕರ ಕುಟುಂಬ ವರ್ಗಕ್ಕೆ ಸರ್ಕಾರದಿಂದ ತಲಾ ೫ ಲಕ್ಷ ರೂಪಾಯಿ ಪರಿಹಾರ ಚೆಕ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ವಿತರಣೆ ಮಾಡಿದರು.

ಗುರುವಾರ ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಸಮೀಪ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಶಾಲಾ ವಾಹನ ನಡುವೆ ಜರುಗಿದ ಅಪಘಾತದಲ್ಲಿ ಮೃತಪಟ್ಟಿರುವ ಕುರ್ಡಿ ಗ್ರಾಮದ ಸಮರ್ಥ(೭) ಹಾಗೂ ಶ್ರೀಕಾಂತ್ (೧೨) ಇವರ ಕುರ್ಡಿ ಗ್ರಾಮದಲ್ಲಿನ ಮನೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿ, ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ಪರಿಹಾರ ಚೆಕ್ ವಿತರಣೆ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಲು ಬಂದಿದ್ದೇವೆ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ. ಗಾಯಗೊಂಡವರಿಗೆ ತಲಾ ೩ ಲಕ್ಷ ರೂ.ಗಳನ್ನು ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ ಸರ್ಕಾರವೇ ಚಿಕಿತ್ಸೆಯ ವೆಚ್ಚ ಭರಿಸಲಾಗುವುದು ಎಂದರು.

ಗ್ರಾಮಸ್ತರ ಆಕ್ರೋಶ
ಬಸ್ ಹಾಗೂ ಶಾಲಾ ವಾಹನದ ನಡುವೆ ಅಪಘಾತ ಸಂಭವಿಸಿ ಗಂಟೆಗಳೇ ಗತಿಸಿದರೂ ಅಂಬ್ಯೂಲೆನ್ಸ್ ಆಗಲಿ ಯಾವೊಬ್ಬ ಅಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡದಿರುವುದನ್ನು ಕುರಡಿ ಗ್ರಾಮದ ಗ್ರಾಮಸ್ತರು ಮತ್ತು ಮೃತ ವಿದ್ಯಾರ್ಥಿಗಳ ಸಂಬAಧಿಕರು ಸಚಿವ ಡಾ.ಶರಣ ಪ್ರಕಾಶ ಪಾಟೀಲರನ್ನು ತರಾಟಗೆ ತಗೆದುಕೊಂಡರು.

ಈ ಸಂದರ್ಭದಲ್ಲಿ ಸಮಾಧಾನ ಪಡಿಸಲು ಶಾಸಕ ಬಸನಗೌಡ ದದ್ದಲ್ ಮುಂದಾದರು. ಆಗ ಸಾರ್ವಜನಿಕರು ಅಲ್ಲರಿ ಬಸ್ ಅಪಘಾತದಲ್ಲಿ ಮಕ್ಕಳು ರಸ್ತೆಯಲ್ಲಿ ಬಿದ್ದು ನರಳುತ್ತಿರುವುದನ್ನು ಗಮನಿಸಿದರೆ ಹೆತ್ತವರ ಕರಳು ಚುರುಕ್ ಎನ್ನುತ್ತದೆ. ಎಷ್ಟೇ ಬೇಡಿಕೊಂಡರೂ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ಅಂಬ್ಯೂಲೆನ್ಸ್ಗಳು ಬೇಗನೆ ಬರಲಿಲ್ಲ. ಇದರಿಂದ ತೀರ್ವವಾಗಿ ಗಾಯಗೊಂಡಿದ್ದ ಮಕ್ಕಳು ಎಷ್ಟು ನೂವನ್ನು ಅನುಭವಿಸಿದರು ಗೊತ್ತೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರಲ್ಲದೆ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಇದೇ ಸಂದರ್ಭ ಶಾಸಕರಾದ ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ಬಸನಗೌಡ ದದ್ದಲ್, ವಿ.ಪ ಸದಸ್ಯ ಎ.ವಸಂತ ಕುಮಾರ್, ಜಿಲ್ಲಾಧಿಕಾರಿ ನಿತೀಶ್.ಕೆ., ಜಿ.ಪಂ ಸಿಇಒ ರಾಹುಲ್ ತುಕರಾಮ್ ಪಾಂಡ್ವೆ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಮ್.ಪುಟ್ಟಮಾದಯ್ಯ, ರಾಯಚೂರು ಸಹಾಯಕ ಆಯುಕ್ತರಾದ ಮೈಬೂಬಿ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮೈಬೂಬು ಜಿಲಾನಿ, ರಿಮ್ಸ್ ನಿರ್ದೇಶಕ ರಮೇಶ, ಆಡಳಿತಾಧಿಕಾರಿ ಡಾ.ಕೆ.ಆರ್.ದುರುಗೇಶ, ಡಿಹೆಚ್‌ಒ ಡಾ.ಸುರೇಂದ್ರ ಬಾಬು ಸೇರದಂತೆ ಇತರರಿದ್ದರು.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!