Thursday, December 1, 2022

Latest Posts

ಮೃತರ ಕುಟುಂಬಸ್ಥರಿಗೆ ಧನಸಹಾಯ ವಿತರಿಸಿದ ಸಚಿವ ಪ್ರಭು ಚವ್ಹಾಣ್

ಹೊಸದಿಗಂತ ವರದಿ, ಬೀದರ್
ಪಶು ಸಂಗೋಪನೆ ಸಚಿವರಾದ ಪ್ರಭು ಚವ್ಹಾಣ ಅವರು ಇತ್ತೀಚಿಗೆ ಔರಾದ(ಬಿ) ತಾಲ್ಲೂಕಿನ ವಿವಿಧೆಡೆ ಗ್ರಾಮ ಸಂಚಾರ ನಡೆಸಿ ರಸ್ತೆ ಅಪಘಾತ ಹಾಗೂ ಮತ್ತಿತರೆ ಕಾರಣಗಳಿಂದ ಮೃತಪಟ್ಟ ಬಡ ಕುಟುಂಬಗಳಿಗೆ ಭೇಟಿ ನೀಡಿ ವೈಯಕ್ತಿಕ ಸಹಾಯ ಮಾಡಿದರು.
ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಮೆಡಪಳ್ಳಿ ಗ್ರಾಮದ ದಿ.ಸಂತೋಷ ಅವರ ಪತ್ನಿ, ಕಂದಗೂಳ ಗ್ರಾಮದಲ್ಲಿ ಆಕಸ್ಮಿಕವಾಗಿ ಮೃತಪಟ್ಟ ವಿಶ್ವನಾಥ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕ ಧನಸಹಾಯ ವಿತರಿಸಿದರು.
ಕಂದಗೂಳ ಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಲಕ್ಷ್ಮಣ ಮಾಣಿಕ ಅವರ ಮನೆಗೆ ತೆರಳಿ ಆಸ್ಪತ್ರೆ ಖರ್ಚಿಗಾಗಿ ಸಹಾಯ ಮಾಡಿದರು. ಇದೇ ಗ್ರಾಮದ ಜ್ಞಾನೇಶ್ವರ ಭಾವುರಾವ ಅವರ ಎರಡು ಎಮ್ಮೆಗಳು ಮೃತಪಟ್ಟ ಹಿನ್ನೆಲೆಯಲ್ಲಿ ವೈಯಕ್ತಿಕ ಸಹಾಯ ನೀಡಿ ಧೈರ್ಯ ಹೇಳಿದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಬಿರಾದಾರ, ಸುರೇಶ ಭೋಸ್ಲೆ, ಸಚಿನ್ ರಾಠೋಡ್, ಪ್ರತೀಕ್ ಚವ್ಹಾಣ, ದೊಂಡಿಬಾ ನರೋಟೆ, ಶರಣಪ್ಪ ಪಂಚಾಕ್ಷರಿ, ಹಣಮಂತ ಸುರನಾರ, ವೆಂಕಟ ಡೊಂಬಾಳೆ, ಪ್ರದೀಪ ಪವಾರ್, ಗೌತಮ ತಾಂದಳೆ ಸೇರಿದಂತೆ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!