ಹೊಸ ದಿಗಂತ ವರದಿ, ಬಳ್ಳಾರಿ:
ಸಚಿವ ಪ್ರಿಯಾಂಕ ಖರ್ಗೆ, ರಾಜಕಾರಣದಲ್ಲಿ ಇನ್ನೂ ಕಣ್ಣುಬಿಟ್ಟಿಲ್ಲ, ಮುಖ್ಯಮಂತ್ರಿ ಆಗ್ತೇನೆ ಅಂತಾರೆ, ಹಿರೀಯ ನಾಯಕರು, ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮಾಡಿಲ್ಲ, ಇವರೇನು ಆಗ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಲೇವಡಿ ಮಾಡಿದರು.
ನಗರದ ಸಂಗನಕಲ್ಲು ರಸ್ತೆಯ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ನಮ್ಮ ಅವಧಿಯಲ್ಲಿ ಕಾಂಗ್ರೆಸ್ ನವರು ಶೇ.40 ಸರ್ಕಾರ ಎಂದು ಅಪಪ್ರಚಾರ ಮಾಡುತ್ತಿದ್ದರು, ಕಾಂಗ್ರೆಸ್ ಸುಳ್ಳು ಹೇಳುವುದರಲ್ಲಿ ನಿಶ್ಚೀಮರು. ಎಂಜಿನೀಯರ್ ಪ್ರಹ್ಲಾದ್ ಎನ್ನುವವರು ಗುತ್ತಿಗೆದಾರರಿಂದ ಕಮೀಶನ್ ವಸೂಲಿ ಮಾಡಿದ್ದಾರೆ ಎಂದು ಕೆಂಪಯ್ಯ ಅವರು ಹೇಳಿದ್ದು, ನಿಜವಾಗಲು ಕಾಂಗ್ರೆಸ್ ಗೆ ನೈತಿಕತೆ ಇದ್ದರೇ, ಕೂಡಲೇ ಸಿ.ಎಂ.ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರಹ್ಲಾದ್ ಅವರು ವಸೂಲಿ ಮಾಡಿದ ಕಮಿಶನ್ ಪ್ರಕರಣವನ್ನು ತನಿಖೆ ನಡೆಸಿ, ಯಾರೇ ಇರಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು. ಪ್ರಹ್ಲಾದ್ ಹಾಗೂ ಕೆಂಪಯ್ಯ ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿ, ಹಣ ಎಲ್ಲಿಂದ ಬಂತು, ಯಾರು ನೀಡಿದ್ದು, ಯಾತಕ್ಕೆ ನೀಡಿದ್ದು, ಎನ್ನುವುದು ಬಹಿರಂಗವಾಗಲಿ ಎಂದು ಒತ್ತಾಯಿಸಿದರು.
ಬಿಜೆಪಿ ಆಪರೇಶನ್ ಮಾಡೋಲ್ಲ, ಕಾಂಗ್ರೆಸ್ ಗೆ ಜನರು ಸಂಪೂರ್ಣ ಬಹುತಮ ನೀಡಿದ್ದಾರೆ, ಹೀಗಿರುವಾಗ ನಾವು ಆಪರೇಶನ್ ಗೆ ಕೈ ಹಾಕುವ ಪ್ರಮೆಯವೇ ಇಲ್ಲ, ಕುರ್ಚಿಗಾಗಿ ಕಿತ್ತಾಟ, ಆಡಳಿತ ಶಾಸಕರೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ, ಕಾಂಗ್ರೆಸ್ ಹಾದಿ ಬೀದಿಗೆ ಬಂದಿದೆ. ಸಿ.ಎಂ.ಹಾಗೂ ಡಿಸಿಎಂ ಸೇರಿದಂತೆ ಯಾವುದೇ ವಿಚಾರವಿರಲಿ, ಬಹಿರಂಗವಾಗಿ ಮಾತಾಡೋದು ಬೇಡ, ಎಂದು ವರೀಷ್ಟರು ಖಡಕ್ ಸೂಚನೆ ನೀಡಿದ್ದರು, ಮರುದಿನವೇ ಸಿ.ಎಂ.ಸಿದ್ದರಾಮಯ್ಯ 5 ವರ್ಷ ನಾನೇ ಸಿ.ಎಂ.ಆಗಿರುವೆ ಎಂದು ಹೇಳಿಕೆ ನೀಡಿದರು, ಮೊದಲು ಹೈಕಮಾಂಡ್ ಸಿದ್ದರಾಮಯ್ಯ ಗೆ ನೋಟೀಸ್ ನೀಡಿ ಎಚ್ಚರಿಸಲಿ ಎಂದು ಒತ್ತಾಯಿಸಿದರು.
ನಮ್ಮದು ಹೈಕಮಾಂಡ್ ಪಕ್ಷ, ಕಾಂಗ್ರೆಸ್ ನವರಂತೆ ಹಾದಿ ಬೀದಿಯಲ್ಲಿ ಆರೋಪ ಪ್ರತ್ಯಾರೋಪ ಮಾಡೋಲ್ಲ ನಾವು, ನಮ್ಮದು ಶಿಸ್ತಿನ ಪಕ್ಷ, ಈಬಾರಿ ಚುನಾವಣೆಗೆ ನಿಲ್ಲುವುದು ಬೇಡ, ಪಕ್ಷದ ಅಭಿವೃದ್ಧಿ ಕೆಲಸದಲ್ಲಿ ತೊಡಗಿ ಅಂದಿದ್ದರು, ಸ್ಪರ್ಧೆಯಿಂದ ಹಿಂದೆ ಸರಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ.ಎಸ್.ಸೋಮಲಿಂಗಪ್ಪ, ಬಸವರಾಜ್ ದಡೆಸ್ಗೂರು, ಜಿಲ್ಲಾಧ್ಯಕ್ಷ ಮುರಹರಗೌಡ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ, ಕೆ.ರಾಮಲಿಂಗಪ್ಪ, ವಿರುಪಾಕ್ಷಗೌಡ ಇತರರಿದ್ದರು.