ಇಡಿ ಅರೆಸ್ಟ್‌ ಬೆನ್ನಲೇ ಆಸ್ಪತ್ರೆ ಸೇರಿದ ಸಚಿವ ಸೆಂಥಿಲ್‌: ಶೀಘ್ರವೇ ಬೈಪಾಸ್‌ ಸರ್ಜರಿ ಅಗತ್ಯ ಎಂದ ವೈದ್ಯರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನ ಒಳಗಾದ ತಮಿಳುನಾಡು ಸಚಿವ ಸೆಂಥಿಲ್‌ ಬಾಲಾಜಿ (Senthil Balaji) ಅವರಿಗೆ ಶೀಘ್ರವೇ ಬೈಪಾಸ್‌ ಸರ್ಜರಿ (Bypass Surgery) ನಡೆಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.

ಅಬಕಾರಿ ಮತ್ತು ಇಂಧನ ಸಚಿವರಾಗಿದ್ದ ಸೆಂಥಿಲ್‌ ಬಾಲಾಜಿ ಅವರನ್ನುಇಂದು ಬೆಳಗ್ಗೆ ಇಡಿ ಅಧಿಕಾರಿಗಳು ಬಂಧಿಸಿದ್ದರು. ಈ ವೇಳೆ ಹೈಡ್ರಾಮವೇ ಸೃಷ್ಟಿದ ಅವರು, ಎದೆಯ ಮೇಲೆ ಕೈಯನ್ನು ಇಟ್ಟು ಕಣ್ಣೀರು ಹಾಕಿ ಗೋಳಾಡಿದ್ದರು. ನಂತರ ಅವರನ್ನು ಚೆನ್ನೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸೆಂಥಿಲ್‌ ಅವರನ್ನು ಪರೀಕ್ಷಿಸಿದ ಬಳಿಕ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರು ಮೆಡಿಕಲ್‌ ಬುಲೆಟಿನ್‌ ಪ್ರಕಟಿಸಿದ್ದಾರೆ. ಬೆಳಗ್ಗೆ 10:40ಕ್ಕೆ ಕೊರೊನರಿ ಆಂಜಿಯೋಗ್ರಾಮ್ ನಡೆಯಿತು. ಈ ವೇಳೆ ಹೃದಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಬೈಪಾಸ್‌ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸಲಹೆ ನೀಡಲಾಗಿದೆ.

ಎಐಎಡಿಎಂಕೆ ನಾಯಕರಾಗಿದ್ದ ಸೆಂಥಿಲ್‌ ಬಾಲಾಜಿ ಜಯಲಲಿತಾ ಆಪ್ತರಾಗಿದ್ದರು. ಜಯಲಲಿತಾ ನಿಧನದ ಬಳಿಕ ಪಕ್ಷ ತೊರೆದು ಡಿಎಂಕೆ ಸೇರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!