ಹೊಸ ದಿಗಂತ ವರದಿ, ಬಳ್ಳಾರಿ:
ಮೆಡಿಕಲ್ ವಿದ್ಯಾರ್ಥಿಗಳ ಸಮಸ್ಯೆ ಹಾಗೂ ಅನ್ಯಾಯದ ಬಗ್ಗೆ ಗಮನ ಸೆಳೆಯಲು ಆರೋಗ್ಯ ಸಚಿವ ಡಿ.ಸುಧಾಕರ್ ಅವರಿಗೆ ಐದು ಬಾರಿ ಕರೆ ಮಾಡಿದರೇ, ಸ್ವೀಕರಿಸಲಿಲ್ಲ, ಕೊನೆಗೆ ಮೆಸೇಜ್ ಮಾಡಿದರೂ ಸ್ಪಂದಿಸದಿರುವುದು ಬೇಸರ ತಂದಿದೆ, ಈ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಪಕ್ಷದ ವರೀಷ್ಠರ ಗಮನಸೆಳೆಯುವೆ ಎಂದು ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಶಾಸಕರಿಗೆ ಈ ರೀತಿ ಸಚಿವರು ವರ್ತಿಸಿದರೇ, ಯ್ಯಾವ ನ್ಯಾಯ, ಎಲ್ಲರೂ ಅಲ್ಲ, ಕೆಲ ಸಚಿವರು ಆಕಾಶದಿಂದ ಬಿದ್ದವರಂತೆ ವರ್ತನೆ ಮಾಡ್ತಿದ್ದಾರೆ, ಕೆಲವರಂತೂ ಅವರ ಅಹಂಕಾರ ಕುತ್ತಿಗೆ ವರೆಗೂ ಬಂದು ನಿಂತಿದೆ, ಸಚಿವರ ಈ ನಡವಳಿಕೆ ಸರಿಯಲ್ಲ, ಇದರಿಂದ ಪಕ್ಷಕ್ಕೂ ಡ್ಯಾಮೇಜ್ ಆಗಲಿದೆ, ಮುಖ್ಯಮಂತ್ರಿಗಳು ಇಂತವರಿಗೆ ಕರೆದು ಬುದ್ದಿವಾದ ಹೇಳುವ ವಿಶ್ವಾಸವಿದೆ, ಕೆಲ ಐಎಎಸ್ ಅಧಿಕಾರಿಗಳ ಕತೆಯೂ ಇದೇ ರೀತಿ ಎಂದರು.
ಮೂವತ್ತು ಸೆಂಕೆಂಡ್ ನಲ್ಲಿ ಸ್ಪಂದಿಸಿದ ಸಿ.ಎಂ.: ಎಂಬಿಬಿಎಸ್ ಸೀಟ್ ವಿಚಾರದಲ್ಲಿ 88 ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮುಖ್ಯಮಂತ್ರಿ ಅವರನ್ನು ಗಮನಸೆಳೆದರೇ, ಮೂವತ್ತೇ ಸೆಕೆಂಡ್ ನಲ್ಲೇ ಸಂಬಂದಿಸಿದವರೊಂದಿಗೆ ಮಾತನಾಡಿ ಸರಿಪಡಿಸಿ ನ್ಯಾಯ ಕಲ್ಪಿಸಿದರು, ಎಲ್ಲ ವಿದ್ಯಾರ್ಥಿಗಳ ಪರವಾಗಿ ಅಭಿನಂದನೆ ಸಲ್ಲಿಸುವೆ.
ಕಲ್ಯಾಣ ಕರ್ಣಾಟಕ ಭಾಗದ ವಿಧ್ಯಾರ್ಥಿಗಳಿಗೆ ಎಂಬಿಬಿಎಸ್ ಹಾಗೂ ಎಂಡಿ ಸೀಟ್ ಗಳನ್ನು ಕಡಿತ ಮಾಡಲಾಗಿತ್ತು. ಈ ಕುರಿತು ಸಿ.ಎಂ.ಅವರ ಗಮನಸೆಳೆದರೇ ಕೆಲ ಸೆಕೆಂಡ್ ನಲ್ಲೇ ಸರಿಪಡಿಸಿದರು. ಇದಕ್ಕೂ ಮುನ್ನ ಸಚಿವ ಸುಧಾಕರ್ ಅವರನ್ನು ಸಂಪರ್ಕಿಸಿದರೆ ನಮ್ಮ ಕರೆ ಸ್ವೀಕರಿಸಲಿಲ್ಲ, ಸಚಿವ ಸುಧಾಕರ್ ಸಿ.ಎಂ ಅವರಿಗಿಂತ ದೊಡ್ಡವರಾ ಎಂದು ಪ್ರಶ್ನಿಸಿದರು. ಇವರ ಜೊತೆ ಕೆಲ ಸಚಿವರೂ ಇದೇ ರೀತಿ ಇದ್ದು, ಐಎಎಸ್ ನ ಕೆಲ ಅಧಿಕಾರಿಗಳು ಕಥೆಯೂ ಇದೇ ರೀತಿಯಾಗಿದೆ, ಇದಕ್ಕೆ ಕಡಿವಾಣ ಹಾಕಬೇಕು ಇಲ್ಲದಿದ್ದರೇ ಪಕ್ಷಕ್ಕೆ ಹಾನಿಯಾಗಲಿದೆ, ಜನರಿಗೆ ನಾವು ಇಲ್ಲಿ ಉತ್ತರ ಹೇಳುವುದು ಕಷ್ಟವಾಗಲಿದೆ ಎಂದರು. ಈ ಸಂದರ್ಭದಲ್ಲಿ ಭಾಜಪ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಇಬ್ರಾಹಿಂ ಬಾಬು, ವೀರಶೇಖರ್ ರೆಡ್ಡಿ, ರಾಜೀವ್ ಸೇರಿದಂತೆ ಇತರರಿದ್ದರು.