ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಲು ಸಿದ್ಧರಾಗುವಂತೆ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಕೇಳಿಕೊಂಡಿದ್ದಾರೆ. ಈ ಕುರಿತು ಈಗಾಗಲೇ ತರಂಗಾಂತರ ನಿಯೋಜನೆ ಪತ್ರ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿ 5ಜಿ ಸೇವೆಗಳು ಶೀಘ್ರವೇ ಪ್ರಾರಂಭವಾಗುವ ಕುರಿತು ಈಗಾಗಲೇ ನಿರೀಕ್ಷೆಗಳು ಹುಟ್ಟಿಕೊಂಡಿವೆ. ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿಯವರು 5G ಸೇವೆಗಳು ನಿರೀಕ್ಷೆಗಿಂತ ಬೇಗ ಲಭ್ಯವಾಗಲಿವೆ. 5G ವೇಗವು ದೇಶದಲ್ಲಿ 4G ವೇಗಕ್ಕಿಂತ 10X ವೇಗವಾಗಿರುತ್ತದೆ ಎಂದು ಉಲ್ಲೇಖಿಸಿದ್ದರು. ಇದು 5ಜಿಯ ಕುರಿತಾಗಿ ಜನರ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ.
5ಜಿಯ ಅಧಿಕೃತ ಬಿಡುಗಡೆಗೂ ಮುಂಚಿತವಾಗಿಯೇ ರಿಲಯನ್ಸ್ ಜಿಯೋ ಮತ್ತು Vi ಸೇರಿದಂತೆ ಟೆಲಿಕಾಂ ಆಪರೇಟರ್‌ಗಳು 5G- ಸಂಬಂಧಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಏರ್‌ಟೆಲ್ ಮತ್ತು ಜಿಯೋ ಈ ತಿಂಗಳ ಕೊನೆಯಲ್ಲಿ ತಮ್ಮ 5G ಸೇವೆಗಳ ಮೊದಲ ಹಂತವನ್ನು ಹೊರತರುವ ನಿರೀಕ್ಷೆಯಿದೆ, ಈ ವರ್ಷದ ಕೊನೆಯಲ್ಲಿ ಅಧಿಕೃತ ಬಿಡುಗಡೆ ನಡೆಯಲಿದೆ. ಆದರೆ ಟೆಲಿಕಾಂ ಆಪರೇಟರ್‌ಗಳು ಭಾರತದಲ್ಲಿ 5G ಲಾಂಚ್ ಟೈಮ್‌ಲೈನ್‌ನ ಯಾವುದೇ ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂದು ಮೂಲಗಳು ವರದಿ ಮಾಡಿವೆ.