ರಾಜ್ಯ ಕಾಂಗ್ರೆಸ್‌ ಸರಕಾರದಲ್ಲಿ ಶುರುವಾಯಿತು ಸಚಿವ ಸ್ಥಾನ ಲಾಬಿ: ದೆಹಲಿಯತ್ತ ಶಾಸಕರ ಓಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ ಸರಕಾರ ರಚನೆ ಮಾಡಿದ್ದೂ, ಇದೀಗ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್‌ ಸಜ್ಜಾಗುತ್ತಿದೆ.

ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಪ್ರಯಾಸಪಟ್ಟು ಒಬ್ಬರನ್ನು ಆಯ್ಕೆ ಮಾಡಲಾಗಿದೆ. ಆದರೆ ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿದ್ದು, ಕಾಂಗ್ರೆಸ್‌ ಶಾಸಕರು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಬಣ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಣ ಹಾಗೂ ಹೈಕಮಾಂಡ್‌ ಬಣಗಳಾಗಿ ಒಟ್ಟು ಮೂರು ಬಣಗಳು ರಚನೆಯಾಗಿವೆ. ಯಾವ ಬಣಕ್ಕೆ ಎಷ್ಟು ಸಚಿವ ಸ್ಥಾನ ಸಿಗಲಿದೆ ಎಂಬುದು ರಾಜ್ಯದ ಜನತೆಗೆ ಕುತೂಹಲ ಮೂಡಿಸಿದೆ.

ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ದೆಹಲಿಗೆ ಪ್ರಯಾಣ ಬೆಳೆಸದಿದ್ದು, ತಮ್ಮ ಬಣದವರಿಗೆ ಹೆಚ್ಚಿನ ಸಚಿವ ಸ್ಥಾನಗಳನ್ನು ಪಡೆಯಲು ಲಾಬಿ ಆರಂಭಿಸಲಿದ್ದಾರೆ.

ಇದರ ಬೆನ್ನಲ್ಲೇ ಶಾಸಕರಾದ ವಿನಯ್ ಕುಲಕರ್ಣಿ, ಸಂತೋಷ್ ಲಾಡ್, ಅನಿಲ್ ಮಾದು, ಟಿ.ರಘುಮೂರ್ತಿ, ರಾಘವೇಂದ್ರ ಹಿಟ್ನಾಳ್, ಬಸವರಾಜ್ ಶಿವಣ್ಣ, ಸಿರಗುಪ್ಪ ಶಾಸಕ ನಾಗರಾಜ್, ಬಸವರಾಜ್ ಕೆ ಎಸ್, ಬೀಮಾ ನಾಯಕ್, ತುಕಾರಾಂ, ಎಸ್ ಎಸ್ ಮಲ್ಲಿಕಾರ್ಜುನ, ಡಿ ಸುಧಾಕರ್, ವೆಂಕಟೇಶ್ ಪಾವಗಡ, ಆರ್ ಬಿ ತಿಮ್ಮಾಪುರ, ಅಪ್ಪಾಜಿ ನಾಡಗೌಡ, ಅಶೋಕ್ ಪಟ್ಟಣ್, ಬಸವರಾಜ ರಾಯರೆಡ್ಡಿ, ನಜೀರ್ ಅಹಮದ್, ಆರ್ ವಿ ದೇಶಪಾಂಡೆ ಹಾಗೂ ಬೀದರ್ ರಹೀಂ ಖಾನ್ ಸಚಿವ ಸ್ಥಾನದ ಲಾಭಿ ಮಾಡಲು ದೆಹಲಿಯತ್ತ ಪ್ರಯಾಣ ಬೆಳೆಸುತ್ತಿದ್ದಾರೆ.

ಎಲ್ಲ ಶಾಸಕರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ಹೊರಡಲು ಸಿದ್ಧವಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!