ಹೊಸದಿಗಂತ ವರದಿ ಸೋಮವಾರಪೇಟೆ:
ಅಪ್ರಾಪ್ತನಿಗೆ ವಾಹನ ಚಾಲಿಸಲು ಅವಕಾಶ ನೀಡಿದ ಪೋಷಕರಿಗೆ ಇಲ್ಲಿನ ಜೆಎಂಎಫ್ ಸಿ ನ್ಯಾಯಾಲಯ 25 ಸಾವಿರ ಹಾಗೂ ವಾಹನಕ್ಕೆ ವಿಮೆ ಇಲ್ಲದ ಹಿನ್ನೆಲೆಯಲ್ಲಿ 2ಸಾವಿರ ಸೇರಿದಂತೆ ಒಟ್ಟು 27 ಸಾವಿರ ರೂ.ದಂಡ ವಿಧಿಸಿದೆ.
ಸೋಮವಾರಪೇಟೆ ರೇಂಜರ್ಸ್ ಬ್ಲಾಕ್ ನಿವಾಸಿ ಬಿ.ಎಸ್. ಮಂಜುನಾಥ್ ಎಂಬವರೇ ದಂಡನೆಗೆ ಗುರಿಯಾದವರಾಗಿದ್ದಾರೆ. ಮಂಜುನಾಥ್ ಅವರು ತಮ್ಮ ಅಪ್ರಾಪ್ತ ಪುತ್ರನಿಗೆ ಬೈಕ್ ಚಾಲಿಸಲು ಅವಕಾಶ ನೀಡಿದ್ದರೆನ್ನಲಾಗಿದೆ.
ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಜೆಎಂಎಫ್ ಸಿ ನ್ಯಾಯಾಧೀಶ ಕೆ. ಗೋಪಾಲಕೃಷ್ಣ ಅವರು, ಅಪ್ರಾಪ್ತನಿಗೆ ಬೂಕ್ ಚಾಲಿಸಲು ಅವಕಾಶ ನೀಡಿದ್ದಕ್ಕಾಗಿ 25 ಸಾವಿರ ಹಾಗೂ ವಾಹನಕ್ಕೆ ವಿಮೆ ಇಲ್ಲದಿರುವುದಕ್ಕಾಗಿ 2 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡುವಾಗ ಎಚ್ಚರ ವಹಿಸುವಂತೆ ವೃತ್ತ ನಿರೀಕ್ಷಕ ಮುದ್ದು ಮಹಾದೇವ ಅವರು ಸಲಹೆ ಮಾಡಿದ್ದಾರೆ.