ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಕಂದರಾಬಾದ್ ನ ಮಿಲಿಟರಿ ಕಂಟೋನ್ಮೆಂಟ್ ಗೆ ಕುಡಿಯುವ ನೀರು, ವಿದ್ಯುತ್ ಸ್ಥಗಿತಗೊಳಿಸಲಾಗುತ್ತದೆ ಎಂದು ತೆಲಂಗಾಣ ಮುನ್ಸಿಪಲ್ ಆಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ ಸಚಿವ ಕೆ.ಟಿ.ರಾಮರಾವ್ ಎಚ್ಚರಿಕೆ ನೀಡಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, ಸ್ಥಳೀಯ ಸೇನಾ ಪ್ರಾಧಿಕಾರ ರಸ್ತೆಗಳನ್ನು ಬಂದ್ ಮಾಡುತ್ತಿದೆ. ಇದು ಜನರಿಗೆ ಅನಾನುಕೂಲ ಪರಿಸ್ಥಿತಿ ಎದುರಾಗುತ್ತಿದೆ. ಮಿಲಿಟರಿ ಅಧಿಕಾರಿಗಳಯ ತಮಗೆ ಬಯಸೀದ ರಸ್ತೆ ಮುಚ್ಚುವುದು ಸರಿಯಾಗುವುದುಲ್ಲ.ಇದರಿಂದ ಪಕ್ಕದಲ್ಲಿರುವ ಸಫಿಲ್‌ಗುಡಾ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಹೀಗೆ ಮುಂದುವರೆದರೆ ನಾವು ಮಿಲಿಟರಿ ಕಂಟೋನ್ಮೆಂಟ್ ಗೆ ವಿದ್ಯುತ್ ಮತ್ತು ನೀರು ಪೂರೈಕೆ ಸ್ಥಗಿತಗೊಳಿಸಬೇಕಾಗುತ್ತದೆ ಎಂದರು.
ಕೆಟಿಆರ್ ಹೇಳಿಕೆಗೆ ರಾಜ್ಯ ಬಿಜೆಪಿ ವಿರೋಧಿಸಿದೆ. ಭಾರತೀಯ ಸೇನೆಗೆ ಗೌರವ ಕೊಡದೆ ಕೆಟಿಆರ್ ಮಾತನಾಡಿದ್ದಾರೆ. ಇಡೀ ದೇಶ ರಕ್ಷಣೆ ಮಾಡುವ ಸೇನೆ ಬಗ್ಗೆ ಇಂಥ ಮಾತನಾಡುವುದು ಸರಿಯಲ್ಲ. ಅವರೂ ಕೂಡ ಭದ್ರತೆ ವಿಚಾರಕ್ಕೆ ಸಂಬಂಧಪಟ್ಟಂತೆ ಸೇನಾ ನೆಲೆಗಳ ಸುತ್ತಲಿನ ರಸ್ತೆಗಳನ್ನು ಬಂದ್ ಮಾಡಿಕೊಳ್ಳುತ್ತಾರೆ. ಕೆಟಿಆರ್ ಮಾತುಗಳನ್ನು ಕೇಳಿದರೆ ಅವರು ಹೈದರಾಬಾದ್ನಿಂದ ಸೇನಾ ನೆಲೆಯನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆಕ್ಷೇಪಿಸಿದೆ.