ಲಾಹೋರ್‌ನಲ್ಲಿ ಸರಬ್ಜಿತ್‌ ಸಿಂಗ್‌ ಹಂತಕ ಮಿರ್ ಸರ್ಫರಾಜ್ ನನ್ನು ಗುಂಡಿಕ್ಕಿ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೀರ್ ಸರ್ಫರಾಜ್ ನನ್ನು ಪಾಕಿಸ್ತಾನದ ಲಾಹೋರ್ ನಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ.

ಪಾಕಿಸ್ತಾನದಲ್ಲಿ ಗುಪ್ತಚರ ಆರೋಪದ ಮೇಲೆ ಬಂಧಿಯಾಗಿದ್ದ ಭಾರತೀಯ ಮೂಲದ ಪ್ರಜೆ ಸರಬ್ಜಿತ್‌ ಸಿಂಗ್‌ನನ್ನು 2013ರ ಮೇ 2 ರಂದು ಲಾಹೋರ್‌ನ ಜೈಲಿನಲ್ಲಿಯೇ ಕೊಲೆ ಮಾಡಲಾಗಿತ್ತು. ಲಾಹೋರ್‌ ಮೂಲದ ಡಾನ್‌ ಅಮೀರ್‌ ಸರ್ಫರಾಜ್‌ ಈ ಕೊಲೆ ನಡೆಸಿದ್ದನು.

ಅಂಡರ್‌ವರ್ಲ್ಡ್ ಡಾನ್ ಅಮೀರ್ ಸರ್ಫರಾಜ್ ಲಾಹೋರ್‌ನಲ್ಲಿ ‘ಅಪರಿಚಿತ ದುಷ್ಕರ್ಮಿಗಳು’ ಗುಂಡಿಕ್ಕಿ ಕೊಂದಿದ್ದಾರೆ ಎನ್ನುವ ಸುದ್ದಿಯನ್ನು ಪಾಕಿಸ್ತಾನವೇ ಖಚಿತಪಡಿಸಿದೆ.

ಅಮೀರ್ ಸರ್ಫರಾಜ್ ಪಾಕಿಸ್ತಾನದ ಕೋಟ್ ಲಖ್ಪತ್ ಜೈಲಿನಲ್ಲಿ ಸರಬ್ಜಿತ್ ನನ್ನು ಪಾಲಿಥಿನ್ ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಆದೇಶದ ಮೇರೆಗೆ ಅಮೀರ್ ಸರಬ್ಜಿತ್‌ನನ್ನು ಚಿತ್ರಹಿಂಸೆ ನೀಡಿ ಕೊಂದಿದ್ದನು.

ಭಾರತ-ಪಾಕಿಸ್ತಾನ ಗಡಿಯಲ್ಲಿರುವ ತರ್ನ್ ತರನ್ ಜಿಲ್ಲೆಯ ಭಿಖಿವಿಂಡ್ ಗ್ರಾಮದಲ್ಲಿ ವಾಸ ಮಾಡುತ್ತಿದ್ದ ಸರಬ್ಜಿತ್‌ ಸಿಂಗ್‌ ವೃತ್ತಿಯಲ್ಲಿ ರೈತನಾಗಿದ್ದನು. 1990ರ ಆಗಸ್ಟ್‌ 30 ರಂದು ಗೊತ್ತಿಲ್ಲದೆ ಪಾಕಿಸ್ತಾನದ ಗಡಿಯನ್ನು ತಲುಪಿದ್ದನು. ಈ ವೇಳೆ ಪಾಕಿಸ್ತಾನದ ಸೇನೆ ಈತನನ್ನು ಬಂಧಿಸಿತ್ತು. ಆ ನಂತರ ಸರಬ್ಜಿತ್ ಸಿಂಗ್ ಅವರು ಲಾಹೋರ್ ಮತ್ತು ಫೈಸಲಾಬಾದ್ನಲ್ಲಿ ಬಾಂಬ್ ಸ್ಫೋಟದ ಆರೋಪವನ್ನು ಹೊರಿಸಿ ಜೈಲಿಗೆ ಕಳಿಸಲಾಗಿತ್ತು. ಈ ಬಾಂಬ್ ದಾಳಿಯಲ್ಲಿ 14 ಮಂದಿ ಪ್ರಾಣ ಕಳೆದುಕೊಂಡಿದ್ದರು. 1991 ರಲ್ಲಿ, ಬಾಂಬ್ ಸ್ಫೋಟದ ಆರೋಪದ ಮೇಲೆ ಸರಬ್ಜಿತ್ ಸಿಂಗ್ ಅವರಿಗೆ ಮರಣದಂಡನೆ ಕೂಡ ವಿಧಿಸಲಾಗಿತ್ತು. ಈ ಹಂತದಲ್ಲಿ ಅವರನ್ನು ಲಾಹೋರ್‌ನ ಕೋಟ್‌ ಲಖ್‌ಪತ್‌ ಜೈಲಿನಲ್ಲಿ ಇರಿಸಲಾಗತ್ತು. ಇವರ ಮೇಲೆ ಜೈಲಿನ ಸಹ ಖೈದಿಗಳು ದಾಳಿ ನಡೆಸಿ ಕೊಲೆ ಮಾಡಿದ್ದರು. ಆದರೆ, ಪಾಕಿಸ್ತಾನ ಮಾತ್ರ ಸರಬ್ಜಿತ್‌ ಸಿಂಗ್‌ ಬ್ರೇನ್‌ ಡೆಡ್‌ ಆಗಿ 50ನೇ ವರ್ಷದಲ್ಲಿ ಸಾವು ಕಂಡಿದ್ದಾನೆ ಎಂದು ತಿಳಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!