ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಂಗಾಪುರವೇಟ್ ಲಿಫ್ಟಿಂಗ್ ಇಂಟರ್ ನ್ಯಾಷನಲ್ ನಲ್ಲಿ ಭಾರತದ ಮೀರಾಬಾಯಿ ಚಾನು ಚಿನ್ನ ಗೆದ್ದಿದ್ದಾರೆ.ಈ ಮೂಲಕ ಅವರು 55 ಕೆಜಿ ತೂಕದ ವಿಭಾಗದಲ್ಲಿ 2022ರ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ
ಮೊದಲ ಬಾರಿಗೆ 55 ಕೆಜಿ ತೂಕದ ವಿಭಾಗದಲ್ಲಿ ಸ್ಪರ್ಧಿಸಿದ ಚಾನು, 191 ಕೆಜಿ (86 ಕೆಜಿ + 105 ಕೆಜಿ) ಎತ್ತುವ ಮೂಲಕ ಸಾಧನೆ ಮಾಡಿದ್ದು, ಆಸ್ಟ್ರೇಲಿಯಾದ ಜೆಸ್ಸಿಕಾ ಸೆವಾಸ್ಟೆಂಕೊ ಅವರು ಎರಡನೇ ಸ್ಥಾನ ಪಡೆದರು. 167 ಕೆಜಿ (77 ಕೆಜಿ+90 ಕೆಜಿ), ಎತ್ತಿದ್ದಾರೆ.
ಮಲೇಷ್ಯಾದ ಎಲ್ಲೀ ಕಸ್ಸಂಡ್ರಾ ಎಂಗಲ್ಬರ್ಟ್ ಅವರು 165 ಕೆಜಿ (75 ಕೆಜಿ+90 ಕೆಜಿ) ಎತ್ತುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.