ಮಹಾಶಿವರಾತ್ರಿ ದಿನದಂದು ಶಿವಲಿಂಗ ಶುದ್ಧೀಕರಣ: ಸಿದ್ದಲಿಂಗ ಮಹಾಸ್ವಾಮಿಗಳು

ದಿಗಂತ ವರದಿ ಕಲಬುರಗಿ:

ಮುಂಬರುವ ಮಹಾಶಿವರಾತ್ರಿ ದಿನದಂದು ಜಿಲ್ಲೆಯ ಆಳಂದ ಪಟ್ಟಣದ ರಾಘವ ಚೈತನ್ಯ ದೇವಾಲಯದ ಶಿವಲಿಂಗವನ್ನು ಶಿವಮಾಲಾಧಾರಿ ಹಾಗೂ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಶುಧ್ಧೀಕರಣದ ನಿಮಿತ್ತ ಆಳಂದ ಚಲೋ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಅವರು ನಗರದ ರಾಮ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಪುರಾತನವಾದ ರಾಘವ ಚೈತನ್ಯ ಮಂದಿರದ ದೇವಾಲಯವನು ಧ್ವಂಸ ಮಾಡಿ, ಮೊಘಲರು ಲಾಡ್ಲೆ ಮಶಾಕ್ ದಗಾ೯ವನ್ನು ನಿಮಿ೯ಸಿದ್ದಾರೆ ಎಂದು ಹೇಳಿದರು.

1964ರಿಂದ ಈ ವಿಷಯದ ಬಗ್ಗೆ ನ್ಯಾಯಾಲಯದಲ್ಲಿ ಕೆಸ್ ನಡೆಯುತ್ತಿದ್ದು,ಅತೀಕ್ರಮಣವಾಗಿ ದಗಾ೯ ನಿಮಿ೯ಸಿ, ಕಳೆದ ಕೆಲವು ದಿನಗಳ ಹಿಂದೆ ದೇವಾಲಯದಲ್ಲಿರುವ ಶಿವಲಿಂಗಕ್ಕೆ ಹೇಸಿಗೆ ಹಚ್ಚಲಾಗಿದ್ದು, ಈ ವಿಷಯದ ಬಗ್ಗೆ ಸ್ಥಳೀಯ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ ಒವರು ಸದನದಲ್ಲಿ ಸಹ ವಿಚಾರ ಎತ್ತಿದ್ದಾರೆ ಎಂದರು.

ಸದನದಲ್ಲಿ ವಿಷಯವನ್ನು ಪಸ್ತಾಪಿಸಿ,ಶಿವಲಿಂಗಕ್ಕೆ ಸೂಕ್ತ ಭದ್ರತೆ ಒದಗಿಸಬೇಕೆಂದು ಮನವಿ ಮಾಡಿದರೂ,ಸಹ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂದರು. ಹೀಗಾಗಿ ಹೇಸಿಗೆ ಬಳಿದ ಶಿವಲಿಂಗದ ಶುದ್ಧೀಕರಣ ಕ್ಕಾಗಿ ಬರುವಂತಹ ಮಾಚ೯ 1ರಂದು ಆಳಂದ ಚಲೋ ಹಮ್ಮಿಕೊಂಡಿದ್ದೆವೆ ಎಂದರು.

ಆಳಂದ ಚಲೋ ಅಭಿಯಾನದ ಅಂಗವಾಗಿ ಇಂದು ಸಾಂಕೇತಿಕವಾಗಿ 50 ಜನರು ಶಿವಮಾಲಾ ಧಾರಣೆ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ 500 ಜನ ಧಾರಣೆ ಮಾಡಲಿದ್ದಾರೆ ಎಂದು ತಿಳಿಸಿದ ಅವರು, ರಾಮದಾಸರ ದಿನದ ಅಂಗವಾಗಿ ಶಿವಮಾಲಾ ಧಾರಣೆ ಮಾಡಿ, ಶಿವಲಿಂಗ ಪವಿತ್ರವಾದ ಬಳಿಕ ವಿಸಜ೯ನೆ ಮಾಡಲಾಗುವುದು ಎಂದು ತಿಳಿಸಿದರು.

ಬಹಿರಂಗ ಸಮಾವೇಶ: ತಾಲೂಕಿನ ಮಠಾಧೀಶರು ಹಾಗೂ ಹಿಂದೂ ಸಂಘನೆಗಳ ನೇತೃತ್ವದಲ್ಲಿ ಆಳಂದ ತಾಲೂಕಿನಲ್ಲಿ ಮಾಚ೯ 1ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಶಿವಲಿಂಗ ಪೂಜೆಗೆ ಯಾರು ಅಡ್ಡಿಪಡಿಸದ ಹಾಗೇ ಗೃಹ ಸಚಿವರು, ಜಿಲ್ಲಾಡಳಿತ ಆದೇಶ ನೀಡಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಮಹೇಶ್ ಗೊಬ್ಬುರ,ಈಶ್ವರ ಹಿಪ್ಪರಗಿ, ಮಹೇಶ್ ಕುಲಕರ್ಣಿ, ಸಂತೋಷ ಬೆನಕನಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!