ವಿವಿಧ ಸೇವಾ ಕಾರ್ಯಗಳ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ್ಮ ದಿನಾಚರಣೆ

ಹೊಸ ದಿಗಂತ ವರದಿ, ಮೈಸೂರು:

ನಗರದಲ್ಲಿ ವಿವಿಧ ಸಂಘ, ಸಂಸ್ಥೆಗಳು ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ್ಮ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಿದವು.
ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗ ಹಾಗೂ ಜೀವಧಾರ ರಕ್ತನಿಧಿ ಕೇಂದ್ರವು ಪರಿಸರ ಸ್ನೇಹಿ ತಂಡದ ಸಹಯೋಗದೊಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರ 79ನೇ ಜನ್ಮದಿನಾಚರಣೆಯನ್ನು ಹಲವು ಸಾಮಾಜಿಕ ಸೇವಾ ಕಾರ್ಯಕ್ರಮ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು
ನಗರದ ಜಲಪುರಿ ಪೊಲೀಸ್ ಕ್ವಾರ್ಟ್ರಸ್ ಗಣಪತಿ ದೇವಸ್ಥಾನ ಆವರಣದಲ್ಲಿ ನಗರಪಾಲಿಕೆಯ ಮಾಜಿ ಮೇಯರ್ ಸಂದೇಶ್ ಸ್ವಾಮಿ ರವರು ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದರು
ನಂತರ ನಗರದ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ಬಿ.ಎಸ್.ಯಡಿಯೂರಪ್ಪನವರ ಹೆಸರಿನಲ್ಲಿ ವಿಶೇಷ ಪೂಜೆ ಹಾಗೂ ಸಾರ್ವಜನಿಕರಿಗೆ ನಗರಪಾಲಿಕೆ ಸದಸ್ಯೆ ಸೌಮ್ಯ ಉಮೇಶ್ ನೇತೃತ್ವದಲ್ಲಿ ಸಿಹಿ ವಿತರಿಸಲಾಯಿತು.
ನಂತರ ದೊಡ್ಡ ಮಾರ್ಕೆಟ್ ಚಿಕ್ಕಗಡಿಯಾರ ಬಳಿ ಬೇಸಿಗೆ ಬಿಸಿಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಹಾಗೂ ಮೈಲಾಕ್ ಅಧ್ಯಕ್ಷ ಎನ್.ವಿ ಫಣೀಶ್ ಮತ್ತು ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ನೇತೃತ್ವದಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ 100 ಛತ್ರಿಗಳನ್ನು ವಿತರಿಸಲಾಯಿತು. ಬಳಿಕ
ನಂಜುಮಳಿಗೆ ವೃತ್ತದಲ್ಲಿ ಗೋ ಪೂಜೆ ಸಲ್ಲಿಸಿ, ಗೋವುಗಳಿಗೆ ಮೇವು ಬೆಲ್ಲಾ ಆಹಾರ ಪೂರೈಕೆ ಮಾಡಲಾಯಿತು.
ನಂತರ ಸ್ವಾತಂತ್ರ ಹೋರಾಟಗಾರರ ಉದ್ಯಾನವನದಲ್ಲಿ ಮುಡಾ ಸದಸ್ಯರಾದ ನವೀನ್ ಕುಮಾರ್ ನೇತೃತ್ವದಲ್ಲಿ ವಿವಿಧ
ಜಾತಿಯ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಯುವ ಮುಖಂಡ ಕಾಂತೇಶ್, ರಾಜ್ಯಕ್ಕೆ ಬಿಎಸ್.ಯಡಿಯೂರಪ್ಪನವರ ಕೊಡುಗೆ ಬಹಳಷ್ಟಿದೆ. ರಾಜ್ಯದಲ್ಲಿ ರೈತಪರ ಅನೇಕ ಹೋರಾಟಗಳನ್ನು ಹಮ್ಮಿಕೊಂಡು ಬಂದವರು ಬಿ.ಎಸ್.ಯಡಿಯೂರಪ್ಪ. ಹಾಲಿನ ಪ್ರೋತ್ಸಾಹ ಧನ ಹೆಚ್ಚಿಸಿರುವುದು,ಶಾಲೆಗೆ ತೆರಳುವ ರೈತರ ಮಕ್ಕಳಿಗೆ ಸೈಕಲ್ ವಿತರಣೆಯಾಗಿರಬಹುದು,ರೈತರ ಕೃಷಿಸಾಲ ಮನ್ನಾ ಆಗಿರಬಹುದು,ಇನ್ನೂ ಅನೇಕ ರೈತಪರ ಹೋರಾಟಗಳಿರಬಹುದು,ಇವರ ಹೋರಾಟ ರಾಜ್ಯದ ಜನತೆಯ ಮನದಲ್ಲಿ ಮುಂದೆoದಿಗೂ ಅಳಿಸದಂತೆ ಬೇರೂರಿರುತ್ತದೆ ಎಂದು ಹೇಳಿದರು
ಕಾರ್ಯಕ್ರಮದಲಲ್ಲಿ ಶಾಸಕ ಎಲ್ ನಾಗೇಂದ್ರ, ಮೃಗಾಲಯ ಪ್ರಾಧಿಕಾರ ಸದಸ್ಯೆ ಜ್ಯೋತಿ ರೇಚಣ್ಣ, ಹಿಂದುಳಿದ ವರ್ಗದ ನಗರಾಧ್ಯಕ್ಷ ಜೋಗಿ ಮಂಜು ,ಕೆ.ಜೆ ರಮೇಶ್ , ಮಾಜಿ ನಗರ ಪಾಲಿಕೆ ಸದಸ್ಯ ಪಾರ್ಥಸಾರಥಿ, ಕುಮಾರ್ ಬೆಳ್ಳಿಯಪ್ಪ , ಸಮಾಜ ಸೇವಕಿ ನಾಗಮಣಿ ,ವಿದ್ಯಾ ,ಸ್ಥಳೀಯ ವಾರ್ಡ್ 24 ಅಧ್ಯಕ್ಷ ಕೇಬಲ್ ವಿಜಿ ನಗರ ಒಬಿಸಿ ಉಪಾಧ್ಯಕ್ಷ ಸೂರಜ್, ಹರೀಶ್,ಅರವಿಂದ, ಆರ್‌ಎಂಪಿ ಸತೀಶ, ಗಣೇಶ್ ಲಾಳಿಗೆ, ಮೈಸೂರು ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಎಂ ಪಿ ನಾಗರಾಜ್, ನಗರ ರೈತಮೋರ್ಚಾ ಉಪಾಧ್ಯಕ್ಷ ಮಧು ಎನ್ ಪೂಜಾರ್ ,ಜೀವಧಾರ ರಕ್ತನಿಧಿ ಕೇಂದ್ರದ ವ್ಯವಸ್ಥಾಪಕ ಮುತ್ತಣ್ಣ ,ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ ಲೋಹಿತ್, ಯಡಿಯೂರಪ್ಪ ಅಭಿಮಾನಿ ಬಳಗದ ಸದಸ್ಯರಾದ ರಾಜೇಶ್, ಮನೋಹರ, ಸುಚೀಂದ್ರ, ಚಕ್ರಪಾಣಿ ,ಸಮಾಜ ಸೇವಕರು ನವೀನ್ ,ಮುಂತಾದವರು ಉಪಸ್ಥಿತರಿದ್ದರು
ಎಲ್ಲಮ್ಮ ತಾಯಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ; ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರ ಹುಟ್ಟು ಹಬ್ಬವನ್ನು ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಮಂಡಿ ಮೊಹಲ್ಲಾದಲ್ಲಿರುವ ಎಲ್ಲಮ್ಮತಾಯಿ ದೇವಸ್ಥಾನದಲ್ಲಿ ವಿಶೇಷ ಪೂಜೆಸಲ್ಲಿಸಿ ಯಡಿಯೂರಪ್ಪ ರವರಿಗೆ ಆಯಸ್ಸು ಆರೋಗ್ಯವನ್ನು ದೇವರು ನೀಡಲ್ಲಿ ಎಂದು ಪ್ರಾರ್ಥಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ರವಿ ರಾಜಕೀಯ.ಬಿ ಜೆ ಪಿ ಚಾಮರಾಜ ಕ್ಷೇತ್ರ ಉಪಾಧ್ಯಕ್ಷ ಕುಮಾರ್ ಗೌಡ, ವಾರ್ಡ್ ಅಧ್ಯಕ್ಷ ಕೇಬಲ್ ವಿಜಿ, ಓ ಬಿ ಸಿ ಉಪಾಧ್ಯಕ್ಷ ಸೂರಜ್, ರವಿ, ಪ್ರಿಂಟ್ ರಾಜು, ಚಂದ್ರು, ಸುಧಿರ್, ರಂಗಪ್ಪ, ಮಧು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!