ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣಾಧಿಕಾರಿಗಳನ್ನು ರಸ್ತೆಯಲ್ಲೇ ಅಡ್ಡಗಟ್ಟಿ ಬ್ಯಾಲೆಟ್ ಪೇಪರ್, ಲ್ಯಾಪ್ ಟಾಪ್ ದೋಚಿಕೊಂಡು ಖದೀಮರು ಪರಾರಿಯಾಗಿರುವ ಘಟನೆ ರಾಮನಗರದ ಮಾಗಡಿ ತಾಲೂಕಿನ ಹೊಸಪಾಳ್ಯ ಬಳಿ ನಡೆದಿದೆ.
ಹುಳ್ಳೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಹಾಲು ಉತ್ಪಾದಕ ನಿರ್ದೇಶಕ ಸ್ಥಾನಕ್ಕೆ ಚುನವಣೆ ನಡೆಸಲು ತೆರಳುತ್ತಿದ್ದ ಚುನಾವಣಾಧಿಕಾರಿಗಳ ಕಾರನ್ನು ಹೊಸಪಾಳ್ಯ ಹಾಗೂ ಕೆಂಚನಹಳ್ಳಿ ರಸ್ತೆಯ ಮಧ್ಯದಲ್ಲಿ ಅಡ್ಡಗಟ್ಟಿದ್ದಾರೆ. ಬಳಿಕ ಅಧಿಕಾರಿಗಳ ಹತ್ತಿರ ಇದ್ದ ಬ್ಯಾಲೆಟ್ ಪೇಪರ್, ಲ್ಯಾಪ್ ಟಾಪ್ ಮತ್ತು ಇತರೆ ದಾಖಲೆಗಳನ್ನು ದೋಚಿ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಕುದೂರು ಹಾಗೂ ಮಾಗಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.