ಹೊಸದಿಗಂತ ಹೆಸರಲ್ಲಿ ಮತ್ತೆ ಸುಳ್ಳು ಸುದ್ದಿ ಹರಿಬಿಟ್ಟ ಕಿಡಿಗೇಡಿಗಳು: ಓದುಗರೇ ಎಚ್ಚರ ಎಚ್ಚರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸದಿಗಂತ ಪತ್ರಿಕೆಯ ಸುದ್ದಿಯ ಮಾದರಿಯಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ನಕಲಿ ಸುದ್ದಿಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಚಾಳಿ ಮತ್ತೆ ಚುರುಕಾಗಿದ್ದು, ಓದುಗರು ಈ ಬಗ್ಗೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕಿದೆ.

‘ಸಂವಿಧಾನದ ಬದಲಾವಣೆಯನ್ನು ಮೌನವಾಗೇ ಮಾಡೋಣ ಆ ಬಗ್ಗೆ ಬಹಿರಂಗ ಹೇಳಿಕೆ ಬೇಡ’ ಎಂಬ ಶೀರ್ಷಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಹೇಳಿದ್ದಾರೆಂಬ ನಕಲಿ ವರದಿ ಸೃಷ್ಟಿ ಮಾಡಿ ಅದನ್ನು ಹೊಸ ದಿಗಂತ ಪತ್ರಿಕೆಯ ಹೆಸರಿನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದಕ್ಕೂ ಮುನ್ನ ಕೆಲವು ದಿನಗಳ ಹಿಂದೆಯಷ್ಟೇ ‘ದೇಶ ಪ್ರೇಮಿ ಆರೆಸ್ಸೆಸ್‌ನಿಂದ ಮಾತ್ರವೇ ಸಂವಿಧಾನ ಬದಲಾವಣೆ ಸಾಧ್ಯ: ಎಸ್ ಬಾಲರಾಜ್ ಅಭಿಮತ’ ಎಂಬ ಶೀರ್ಷಿಕೆಯಲ್ಲಿ ನಕಲಿ ಸುದ್ದಿ ಹಬ್ಬಿಸಲಾಗಿತ್ತು.

ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಹೊಸದಿಗಂತ ಈ ಬಗ್ಗೆ ಕಾನೂನು ಕ್ರಮಕ್ಕೆ ಮುಂದಾಗಿದೆ.

ಓದುಗರಲ್ಲಿ ಹೊಸದಿಗಂತ ಮನವಿ ನಿಖರ ಹಾಗೂ ನೈಜ ವರದಿಗಳನ್ನು ಹೊಸದಿಗಂತ ಪತ್ರಿಕೆಯ ಅಧಿಕೃತ ಜಾಲತಾಣಗಳಾದ www.hosadigantha.com ಹಾಗೂ www.epaper.hosadigantha.com ನಲ್ಲಿ ಓದುವಂತೆ ನಾವು ಮನವಿ ಮಾಡುತ್ತಿದ್ದೇವೆ.

ಓದುಗರು ಈ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ನಮ್ಮ ಅಧಿಕೃತ WhatsApp ಗ್ರೂಪ್ ಸೇರಿಕೊಳ್ಳಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಸುಳ್ಳು ಸುದ್ದಿ ಎವಾಗ್ಲೂ rss ದೇಶದ ಇತಕಾಗಿ ಕೆಲಸ ಮಾಡುತ್ತಾ ಬಂದಿರುವ ಸಂಗಟ್ಟನೆ ಅಗಿದು ಹಿಂದೂ ಧರ್ಮದ ಹಿತಕ್ಕಾಗಿ ಕೆಲಸ ಮಾಡುತ್ತಾ ಬಂದಿದೆ ವಿನಹಾ ಯಾವುದೇ ದೇಶ ದ್ರೋಹಿ ಚಟುವಟಿಕೆ ಮಾಡಿಲ್ಲ ಸಂಘದ ಗುರಿ ಒಂದೇ .. ದೇಶದ ಇತಾ.ದೇಶದ ರಕ್ಷಣೆ. ದೇಶದ ಭದ್ರತೆ ಹಿಂದೂ ಸಾಮಾಜದ ಒಳಿತಿಗಾಗಿ ಕಾರ್ರ್ಯ ಮಾಡಿದೆ ವಿನ್ಹಾ ಯಾವುದೇ ದೇಶ ವಿರೋಧ ಕೆಲಸಾ ಮಾಡಿಲ್ಲ…
    ಜೈ ಶ್ರೀ ರಾಮ್ 🚩
    ಜೈ ಹಿಂದ್ 🚩
    ವಂದೇ ಮಾತರಮ್ 🚩
    ಭಾರತ್ ಮಾತಾಕಿ ಜೈ🚩
    ಸಂಗಂ ಶರಣಂ ಗಚ್ಛಾಮಿ 🚩

LEAVE A REPLY

Please enter your comment!
Please enter your name here

error: Content is protected !!