ಮಿಸ್ ಊವರ್ಶಿ ಐಕಾನ್-2022 ಸೌಂದರ್ಯ ಸ್ಪರ್ಧೆ : ಜ. 8 ರಂದು ಆಡಿಷನ್

ದಿಗಂತ ವರದಿ ಹುಬ್ಬಳ್ಳಿ:

ನಗರದಲ್ಲಿರುವ ಎಸ್ತರ್ ಫ್ಯಾಷನ್ ವತಿಯಿಂದ ಏರ್ಪಡಿಸಲಾದ ಮಿಸ್ ಊವರ್ಶಿ ಐಕಾನ್-2022 ಸೌಂದರ್ಯ ಸ್ಪರ್ಧೆಗೆ ಪೂರಕವಾಗಿ ಜ. 8 ರಂದು ಬೆಳ್ಳಿಗೆ 10 ರಿಂದ ಸಂಜೆ 5 ರವರೆಗೆ ಕೇಶ್ವಾಪೂರದ ರಾಕಿ ಡ್ಯಾನ್ಸ್ ಕಂಪನಿಯಲ್ಲಿ ಆಡಿಷನ್ ನಡೆಯಲಿದೆ ಎಂದು ಎಸ್ತರ ಫ್ಯಾಷನ್ ವ್ಯವಸ್ಥಾಪಕ ನಿರ್ದೇಶಕಿ ಎಸ್ತರ ಮೊಹಾಂಕಾ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಂತರ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿದೆ. ಅತರ ರಾಷ್ಟ್ರೀಯ ಬ್ಯೂಟಿ ಪೇಜೆಂಟ್ ಸೀಸನ್-1 ನಲ್ಲಿ ಮಿಸ್ಟರ್ ಮತ್ತು ಮೀಸಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ನಡೆಯುವ ಸ್ಪರ್ಧೆಗೆ ಅನುಗುಣವಾಗಿ ಆಡಿಷನ್ ನಲ್ಲಿ ಪ್ರತಿಭೆಗಳ ಆಯ್ಕೆ ಮಾಡಲಾಗುತ್ತದೆ ಎಂದರು.
ಕನ್ನಡ ಚಿತ್ರರಂಗದ ಯೂಸುಫ್ ಖಾನ್ ತೀರ್ಪುಗಾರರಾಗಿ ಆಡಿಷನ್ ನಲ್ಲಿ ಭಾಗವಹಿಸಿದರು. ಆಯ್ಕೆಯಾದ ಸ್ಪರ್ಧಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಜ.29 ಮತ್ತು 30 ಮುಂಬೈನಲ್ಲಿ ಗ್ರ್ಯಾಂಡ್ ಫೈನಲ್ ಸ್ಪರ್ಧೆ ಏರ್ಪಡಿಸಲಾಗಿದೆ. ಅಲ್ಲಿ ನಡೆಯುವ ಮೂರು ಸುತ್ತಿನ ಸ್ಪರ್ಧೆಗಳಲ್ಲಿ ಮೂರು ಸ್ಥಾನ ಆಯ್ಕೆ ಮಾಡಲಾಗುತ್ತದೆ. ಪ್ರಥಮ ಸ್ಥಾನದ ವಿಜೇತರಿಗೆ 5 ಲಕ್ಷ, ದ್ವಿತೀಯ 2 ಲಕ್ಷ ಮತ್ತು ತೃತೀಯ 1 ಲಕ್ಷ ರೂ. ಸೇರಿದಂತೆ ಟ್ರೋಫಿ ಮತ್ತು ಪ್ರಶಸ್ತಿ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯದರ್ಶಿ ಮಿಸ್ ಡೋಸ್ ಹಂಜಿ, ಅದನಾನ್ ಹಕ್ಕಿಂ ಮತ್ತು ಮಜರಹುಸೇನ್ ತಿಮ್ಮನಘಟ್ಟಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!