60 ಅಂತಸ್ತಿನ ಕಟ್ಟಡದಿಂದ ಬಿದ್ದು ‘ಮಿಸ್ ಯುಎಸ್‌ಎ’ ಚೆಸ್ಲಿ ಕ್ರಿಸ್ಟ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

2019 ರಲ್ಲಿ ಮಿಸ್ ಯುಎಸ್‌ಎ ಪಟ್ಟ ಗೆದ್ದಿದ್ದ ಚೆಸ್ಲಿ ಕ್ರಿಸ್ಟ್ 60 ಅಂತಸ್ತಿನ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ.
ಫ್ಯಾಷನ್ ಲೋಕದಲ್ಲಿ ಮಾತ್ರವಲ್ಲದೆ, ವಕೀಲೆಯಾಗಿ, ಟಿವಿ ವರದಿಗಾರ್ತಿಯಾಗಿಯೂ ಕ್ರಿಸ್ಟ್ ಸೇವೆ ಸಲ್ಲಿಸಿದ್ದರು.
ವೈಟ್ ಕಾಲರ್ ಗ್ಲಾಮ್ ಎಂಬ ಫ್ಯಾಷನ್ ಬ್ಲಾಗ್ ಕೂಡ ಕ್ರಿಸ್ಟ್ ಸ್ಥಾಪಿಸಿದ್ದರು.
ನಿನ್ನೆ ನ್ಯೂಯಾರ್ಕ್‌ನಲ್ಲಿ 60  ಅಂತಸ್ತಿನ ಕಟ್ಟಡದಿಂದ ಬಿದ್ದು ಕ್ರಿಸ್ಟ್ ಮೃತಪಟ್ಟಿದ್ದಾರೆ. ಅದೇ ಕಟ್ಟಡದಲ್ಲಿ ಇವರು ಒಂಬತ್ತನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ಇದು ಆತ್ಮಹತ್ಯೆ ಎಂಬಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು, ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿಯಲಿದೆ.
ಕ್ರಿಸ್ಟ್ ಸಾವಿರ ಭಾರತದ ಹರ್ನಾಜ್ ಸಂಧು ಸಂತಾಪ ಸೂಚಿಸಿದ್ದು, ಇದು ನಂಬಲಾಗುತ್ತಿಲ್ಲ. ನೀವು ಯಾವಾಗಲೂ ಅನೇಕರಿಗೆ ಸ್ಪೂರ್ಥಿ ರೆಸ್ಟ್ ಇನ್ ಪೀಸ್ ಚೆಸ್ಲಿ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!