ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಉಗ್ರರ ದಾಳಿಗೆ ಭಾರತದ ಪ್ರತೀಕಾರ ಮುಂದುವರಿದಿದ್ದು, ಪಾಕ್ ತತ್ತರಿಸಿ ಹೋಗಿದೆ. ಇರಲಾರದೆ ಇರುವೆ ಬಿಟ್ಟುಕೊಂಡಂಥಹ ಪರಿಸ್ಥಿತಿಗೆ ಪಾಕಿಸ್ತಾನ ಬಂದು ತಲುಪಿದೆ.
ಇನ್ನು ನಿನ್ನೆಯಷ್ಟೇ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ನಿವಾಸದ ಸಮೀಪದಲ್ಲೇ ಸ್ಫೋಟ ಸಂಭವಿಸಿದ್ದು, ಪ್ರಾಣಭಯದಲ್ಲಿ ಅವರು ಬಂಕರ್ ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶೆಹಬಾಜ್ ಶರೀಫ್ ಅವರ ಮನೆಯಿದೆ. ಆ ಮನೆಯಿಂದ 20 ಕಿಮೀ ದೂರದಲ್ಲೇ ಭಾರೀ ಸ್ಫೋಟದ ಸದ್ದಾಗಿದೆ. ಇದರಿಂದ ಪಾಕ್ ಪ್ರಧಾನಿ ಬೆಚ್ಚಿದ್ದಾರೆ. ಇದರಿಂದ ಪಾಕಿಸ್ತಾನದಲ್ಲಿ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಹಲವು ನಗರಗಳು ಕತ್ತಲಲ್ಲಿ ಸಿಲುಕಿವೆ. ಕೆಲವು ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.