ಇಸ್ರೇಲ್, ಇರಾನ್ ನಡುವೆ ಕ್ಷಿಪಣಿ ಸಮರ: 100ಕ್ಕೂ ಹೆಚ್ಚು ಡ್ರೋನ್‌ಗಳ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಸಮಯದಲ್ಲಿ, ಇರಾನ್ ಪಡೆಗಳು ಇಸ್ರೇಲ್ ವಿರುದ್ಧ ನೂರಾರು ಡ್ರೋನ್ ದಾಳಿಗಳನ್ನು ನಡೆಸಿವೆ. ಈ ಬೆಳವಣಿಗೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಇಸ್ರೇಲ್ ಸೇನೆಯ ಪ್ರಕಾರ, 100 ಕ್ಕೂ ಹೆಚ್ಚು ಡ್ರೋನ್‌ಗಳು ಇರಾನ್‌ನಿಂದ ಇಸ್ರೇಲ್‌ಗೆ ಹಾರುತ್ತಿರುವುದು ಕಂಡುಬಂದಿದೆ.

ಏಪ್ರಿಲ್ 1 ರಂದು, ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನ್‌ ರಾಯಭಾರ ಕಚೇರಿಯ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಇರಾನಿನ ರೆವಲ್ಯೂಷನರಿ ಗಾರ್ಡ್‌ನ ಇಬ್ಬರು ಬ್ರಿಗೇಡಿಯರ್‌ ಜನರಲ್‌ ಸೇರಿದಂತೆ ಏಳು ಸೇನಾ ಅಧಿಕಾರಿಗಳನ್ನ ಕೊಲ್ಲಲ್ಪಟ್ಟರು.

ಇರಾನ್ ಪ್ರತೀಕಾರದ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ವೈಮಾನಿಕ ದಾಳಿಯ ಹೊಣೆಯನ್ನು ಇಸ್ರೇಲ್ ಹೊತ್ತುಕೊಂಡಿದೆ. ಇರಾನ್‌ ದಾಳಿಯ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮುನ್ಸೂಚನೆ ನೀಡಿದ್ದರು. ಇಸ್ರೇಲ್‌ ರಕ್ಷಣೆಗೆ ಬೇಕಾದ ಅಗತ್ಯ ನೆರವು ಒದಗಿಸುವುದಾಗಿ ತಿಳಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!