ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್ ಮೂಲದ ಹಾಲಿವುಡ್ ನಟ, ಆಸ್ಕರ್ ಪುರಸ್ಕೃತ ಜೂಲಿಯನ್ ಸ್ಯಾಂಡ್ಸ್ (65) ಅಸ್ಥಿಪಂಜರ ಪತ್ತೆಯಾಗಿದೆ. ಐದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಅವರ ಅಸ್ಥಿಪಂಜರ ಪತ್ತೆಯಾಗಿದ್ದು, ಜಗತ್ತಿನ ಹಲವು ನಟರು ಸಂತಾಪ ಸೂಚಿಸಿದ್ದಾರೆ.
ಜೂಲಿಯನ್ ಸ್ಯಾಂಡ್ಸ್ ಅವರು ಐದು ತಿಂಗಳ ಹಿಂದೆ ದಕ್ಷಿಣ ಕ್ಯಾಲಿಫೋರ್ನಿಯಾದ ಪರ್ವತ ಏರಿದ್ದರು. ಹಿಮದಿಂದಲೇ ಆವೃತವಾದ ಶಿಖರದಲ್ಲಿ ಪರ್ವತಾರೋಹಣ ಮಾಡುವಾಗ ಅವರು ನಾಪತ್ತೆಯಾಗಿದ್ದರು. ಎಷ್ಟು ಹುಡುಕಿದರೂ ಅವರ ಶವ ಸಿಕ್ಕಿರಲಿಲ್ಲ. ಜೂನ್ 25ರಂದು ಅವರ ಅಸ್ಥಿಪಂಜರಗಳು ಸಿಕ್ಕಿದ್ದು, ಸಿಕ್ಕ ಅಸ್ಥಿಪಂಜರ ನಟರದ್ದೇ ಎಂಬುದು ಸಾಬೀತಾಗಿದೆ.
ಜೂಲಿಯನ್ ಸ್ಯಾಂಡ್ಸ್ ಅವರ ಸಾವಿಗೆ ನಿಜವಾದ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಅವರ ಸಾವಿನ ಕುರಿತು ತನಿಖೆ ನಡೆಸಲಾಗುತ್ತಿದೆ. ವೈದ್ಯಕೀಯ ವರದಿ ಬಂದ ಬಳಿಕವೇ ಈ ಕುರಿತು ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎ ರೂಮ್ ವಿತ್ ಎ ವ್ಯೂ, ಬಾಕ್ಸಿಂಗ್ ಹೆಲೆನಾ, ಲೀವಿಂಗ್ ಲಾಸ್ ವೆಗಾಸ್, ದಿ ಕಿಲ್ಲಿಂಗ್ ಫೀಲ್ಡ್ಸ್, ಓಷಿಯನ್ಸ್ ಥರ್ಟೀನ್ ಸೇರಿ ಹಲವು ಸಿನಿಮಾಗಳು ಜೂಲಿಯನ್ ಸ್ಯಾಂಡ್ಸ್ ಅವರಿಗೆ ಖ್ಯಾತಿ ತಂದುಕೊಟ್ಟಿದ್ದವು.