ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿರಣ್ ಅವರ ರಾವ್ ನಿರ್ದೇಶನದ, ‘ಲಾಪತಾ ಲೇಡೀಸ್’ ಆಗಸ್ಟ್ 9 ರಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರದರ್ಶನಗೊಳ್ಳಲಿದೆ.
ನಿರ್ದೇಶಕರು ಹಾಗೂ ನಿರ್ಮಾಪಕ ಆಮೀರ್ ಖಾನ್ ಸಹ ಪ್ರದರ್ಶನದಲ್ಲಿ ಹಾಜರಿರುತ್ತಾರೆ. ಬಳಿಕ ಪ್ರೇಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಸೂಪರ್ ಹಿಟ್ ಆದ ಲಾಪತಾ ಲೇಡಿಸ್ ಸಿನಿಮಾ ಕ್ರಿಟಿಕ್ಸ್ ಮನಗೆದ್ದಿದೆ. ನಿಜವಾದ ಫೆಮಿನಿಸಂ ಎಂದು ಬಣ್ಣಿಸಲಾಗಿದೆ.
ಸಂಜೆ 4:15 ರಿಂದ 6:20 ರವರೆಗೆ ನ್ಯಾಯಾಲಯದ ಸಮಯದ ನಂತರ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತದೆ ಎಂದು ವರದಿಯಾಗಿದೆ. ನಂತರ ಆಮೀರ್ ಖಾನ್ ಮತ್ತು ಕಿರಣ್ ರಾವ್ ಅವರೊಂದಿಗೆ ಸಂವಾದ ನಡೆಯಲಿದೆ. ಲಿಂಗ ಸಮಾನತೆಯ ವಿಷಯವನ್ನು ಆಧರಿಸಿದ ‘ಲಾಪತಾ ಲೇಡೀಸ್’ ಚಲನಚಿತ್ರವನ್ನು ಶುಕ್ರವಾರ, 9 ರಂದು ಪ್ರದರ್ಶಿಸಲಾಗುವುದು.