ಲಗೇಜ್ ನಾಪತ್ತೆ: ವಿಮಾನಯಾನ ಸಂಸ್ಥೆ ವಿರುದ್ಧ ಗುಡುಗಿದ ನಟ ರಾಣಾ ದಗ್ಗುಬಾಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ತೆಲುಗು ನಟ ರಾಣಾ ದಗ್ಗುಬಾಟಿ ಖಾಸಗಿ ವಿಮಾನಯಾನ ಸಂಸ್ಥೆಯೊಂದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಲಗೇಜ್ ಪತ್ತೆಯಾಗದ ಹಿನ್ನೆಲೆ ಸಿಬ್ಬಂದಿ ವಿರುದ್ಧ ಟ್ವಿಟರ್​ನಲ್ಲಿ ಅಸಮಾಧಾನ ಹೊರಹಾಕಿದ್ದ ರಾಣಾ ದಗ್ಗುಬಾಟಿ, ತನಗೆ ಇಂತಹ ಕೆಟ್ಟ ಅನುಭವ ಆಗಿರಲಿಲ್ಲ ಎಂದು ಕಂಪನಿಯ ಅಧಿಕೃತ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿ ತಮ್ಮ ಪೋಸ್ಟ್ ಹಂಚಿಕೊಂಡಿದ್ದಾರೆ.

 

ಸಂಸ್ಥೆಯು ಇತ್ತೀಚೆಗೆ ಅವರು ಒದಗಿಸುವ ಸೌಲಭ್ಯಗಳು ಮತ್ತು ರಕ್ಷಣೆಯ ಬಗ್ಗೆ ಟ್ವೀಟ್ ಮಾಡಿದ್ದು, ರಾಣಾ ಈ ರೀತಿಯಾಗಿ ಮರುಟ್ವೀಟ್ ಮಾಡಿ ಟೀಕಿಸಿದ್ದಾರೆ.

ಈ ವಿಮಾನಗಳು ನಿಗದಿತ ಸಮಯಕ್ಕೆ ಟೇಕ್ ಆಫ್ ಅಥವಾ ಲ್ಯಾಂಡ್ ಆಗುವುದಿಲ್ಲ. ಅವರು ನಿಮ್ಮ ಸರಕುಗಳ ಬಗ್ಗೆ ಯಾವುದೇ ಪುರಾವೆಗಳನ್ನು ಇಟ್ಟುಕೊಳ್ಳುವುದಿಲ್ಲ ಎಂದು ರಾಣಾ ವಿಂಟರ್ ಸೇಲ್ ಆಫರ್ ಪೋಸ್ಟ್‌ ಅನ್ನು ಹಂಚಿಕೊಂಡು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಅನೇಕ ನೆಟಿಜನ್‌ಗಳು ಮತ್ತು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!