ಮುದ್ದಿನ ಶ್ವಾನ ನಾಪತ್ತೆ: ಪ್ಲೀಸ್ ಹುಡುಕೋಡಿ ಎಂದು ಕಣ್ಣೀರಿಟ್ಟ ನಟಿ ರಮ್ಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಟಿ ರಮ್ಯಾ ಅವರ ಮುದ್ದಿನ ಶ್ವಾನ ನಾಪತ್ತೆಯಾಗಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಕಣ್ಣೀರು ಹಾಕಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಈ ಮಾಹಿತಿ ಸಿಗುತ್ತಿದ್ದಂತೆ ತೀವ್ರ ನೊಂದುಕೊಂಡಿರುವ ರಮ್ಯಾ, ತಕ್ಷಣ ತಮ್ಮ ಚುನಾವಣಾ ಪ್ರಚಾರ ಕಾರ್ಯವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ.

ರಾತ್ರಿ ೧೦ ಗಂಟೆಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹಿಂತಿರುಗುವುದು ನಿಗದಿಯಾಗಿತ್ತು. ಆದರೆ ತೀವ್ರ ವಿಚಲಿತರಾಗಿರುವ ರಮ್ಯಾ ಕಾರಿನಲ್ಲೇ ವಾಪಾಸ್ಸಾಗುತ್ತಿದ್ದು, ನಿರಂತರ ಕಣ್ಣೀರು ಹಾಕುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ರಮ್ಯಾ ವಾಸವಿದ್ದ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ನಾಯಿ ಕಾಣೆಯಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತನ್ನ ನೆಚ್ಚಿನ ನಾಯಿಯನ್ನು ಹುಡುಕಿಕೊಡುವಂತೆ ಅವರು ಸಾರ್ವಜನಕರಲ್ಲಿ ಮನವಿ ಮಾಡಿದ್ದಾರೆ. ಇ

ನಾಯಿ ಕಾಣೆಯಾಗಿರುವ ಕುರಿತು ಟ್ವೀಟ್ ಮಾಡಿರುವ ರಮ್ಯಾ, ಮೇ 6 ರಿಂದ ನೆಚ್ಚಿನ ನಾಯಿ ಚಾಂಪ್ ಕಾಣೆಯಾಗಿದೆ. ಕರಿ ಬಣ್ಣದ ಪರ್ಟೈಲಿ ತಳಿಯ ನಾಯಿ ಅದಾಗಿದ್ದು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನವನ್ನು ಕೊಡಲಾಗುವುದು. ಯಾರಿಗಾದರೂ ನಾಯಿ ಕಂಡರೆ 7012708137 ಈ ನಂಬರ್ ಗೆ ಕಾಂಟ್ಯಾಕ್ಟ್ ಮಾಡಿ ಎಂದು ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!