ಮಿಚೆಲ್ ಬ್ರೇಸ್‌ವೆಲ್ ಹೋರಾಟಕ್ಕೆ ಸಿಗದ ಫಲ: ಭಾರತಕ್ಕೆ ಗೆಲುವಿನ ಹಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಕೊನೆಯ ಕ್ಷಣದಲ್ಲಿ ಗೆದ್ದು ಶುಭಾರಂಭ ಮಾಡಿದೆ.
ಇಂಡಿಯಾ ನೀಡಿದ ಬೃಹತ್ ಟಾರ್ಗೆಟ್ ವಿರುದ್ಧ ಅಂತಿಮ ಹಂತದ ತನಕ ಮಿಚೆಲ್ ಬ್ರೇಸ್‌ವೆಲ್ ಹೋರಾಟ ನಡೆಸಿದ್ರು ಅಂತಿಮವಾಗಿ ಗೆಲುವು ಭಾರತದ ಪಾಲಾಯಿತು.

ನ್ಯೂಜಿಲೆಂಡ್ 49.2 ಓವರ್‌ಗೆ 337 ರನ್ ಸಿಡಿಸಿ ಆಲೌಟ್ ಆಯಿತು. ಇದರೊಂದಿಗ ಭಾರತ 12 ರನ್ ಗೆಲುವು ದಾಖಲಿಸಿತು.
ಟಾರ್ಗೆಟ್ ಚೇಸಿಂಗ್ ಹೊರಟ ನ್ಯೂಜಿಲೆಂಡ್ ತಂಡಕ್ಕೆ ನಿರೀಕ್ಷಿತ ಆರಂಭವೂ ಪಡೆಯಲಿಲ್ಲ. ಡೆವೋನ್ ಕಾನ್ವೇ 10 ರನ್ ಸಿಡಿಸಿ ಔಟಾದರು. ಫಿನ್ ಅಲೆನ್ ಹೋರಾಟ 40 ರನ್‌ಗಳಿಗ ಅಂತ್ಯವಾಯಿತು. ಇತ್ತ ಹೆನ್ರಿ ನಿಕೋಲಸ್ 18 ರನ್ ಸಿಡಿಸಿ ನಿರ್ಗಮಿಸಿದರು. 78 ರನ್‌ಗಳಿಗೆ ನ್ಯೂಜಿಲೆಂಡ್ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಡರಿಲ್ ಮಿಚೆಲ್ ಕೇವಲ 9 ರನ್ ಸಿಡಿಸಿ ನಿರಾಸೆ ಮೂಡಿಸಿದರು. ನಾಯಕ ಟಾಮ್ ಲಾಥಮ್ ಹೋರಾಟ ನೀಡಿದರು. ಗ್ಲೆನ್ ಫಿಲಿಪ್ಸ್ 11 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಲಾಥಮ್ ಹೋರಾಟ 24 ರನ್‌ಗೆ ಅಂತ್ಯವಾಯಿತು. 131 ರನ್‌ಗೆ ನ್ಯೂಜಿಲೆಂಡ್ 6 ವಿಕೆಟ್ ಕಳೆದುಕೊಂಡಿತು.

ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಮಿಚೆಲ್ ಬ್ರೆಸ್‌ವೆಲ್ ಹಾಗೂ ಮಿಚೆಲ್ ಸ್ಯಾಂಟ್ನರ್ ಆಸರೆಯಾದರು.
ಬ್ರೇಸ್‌ವೆಲ್ ಅಬ್ಬರಕ್ಕೆ ಟೀಂ ಇಂಡಿಯಾ ಲೆಕ್ಕಾಚಾರ ಬದಲಾಗತೊಡಗಿತು. ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಕಠಿಣ ಸವಾಲು ಎದುರಾಯಿತು. ಬ್ರೇಸ್‌ವಲ್ ಸೆಂಚುರಿ ಸಿಡಿಸಿದರು. ಇತ್ತ ಸ್ಯಾಂಟ್ನರ್ ಕೂಡ ಉತ್ತಮ ಸಾಥ್ ನೀಡಿದರು. ಅರ್ಧಶತಕ ಸಿಡಿಸಿ ಅಬ್ಬರಿಸಿದರು.

ಸ್ಯಾಂಟ್ನರ್ 57 ರನ್ ಸಿಡಿಸಿ ಔಟಾದರು. ಆದರೆ ಬ್ರೇಸ್‌ವೆಲ್ ಹೋರಾಟ ಮುಂದುವರಿಯಿತು. ನ್ಯೂಜಿಲೆಂಡ್ ಗೆಲುವಿಗೆ ಅಂತಿಮ 18 ಎಸೆತದಲ್ಲಿ 41 ರನ್ ಅವಶ್ಯಕತೆ ಇತ್ತು. 8 ರನ್ ಸಿಡಿಸಿ ಲ್ಯೂಕಿ ಫರ್ಗ್ಯೂಸನ್ ವಿಕೆಟ್ ಕಳೆದುಕೊಂಡಿತು.ಅಂತಿಮ 6 ಎಸೆತದಲ್ಲಿ ನ್ಯೂಜಿಲೆಂಡ್ ಗೆಲುವಿಗೆ 20 ರನ್ ಬೇಕಿತ್ತು. ಮೊದಲ ಎಸೆತದಲ್ಲಿ ಬ್ರೇಸ್‌ವೆಲ್ ಸಿಕ್ಸರ್ ಸಿಡಿಸಿದರು. ಮರು ಎಸೆತದ ವೈಡ್ ಆದರೆ 2ನೇ ಎಸೆತದಲ್ಲಿ ಬ್ರೇಸ್‌ವೆಲ್ ಎಲ್‌ಬಿ ಬಲೆಗೆ ಬಿದ್ದರು. ಈ ಮೂಲಕ ನ್ಯೂಜಿಲೆಂಡ್ 49.2 ಓವರ್‌ಗಳಲ್ಲಿ 337 ರನ್ ಸಿಡಿಸಿ ಆಲೌಟ್ ಆಯಿತು. ಭಾರತ 12 ರನ್ ಗೆಲುವು ಕಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!