ಮಿಜೋರಾಂ ಚುನಾವಣಾ ಫಲಿತಾಂಶ ದಿನ ಬದಲಾವಣೆ: ಡಿ.4 ಕ್ಕೆ ನಡೆಯಲಿದೆ ಮತ ಎಣಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಚರಾಜ್ಯ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ . ಆದ್ರೆ ಇದೀಗ ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಡಿಸೆಂಬರ್ 4 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ಸಂಜೆ ಪ್ರಕಟಿಸಿದೆ.

ಈ ಮೊದಲು ಡಿಸೆಂಬರ್ 3 ರಂದು ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್ಗಢದ ಜೊತೆಗೆ ಮಿಜೋರಾಂ ಚುನಾವಣೆಯ ಫಲಿತಾಂಶವನ್ನು ಘೋಷಿಸೋದಾಗಿ ತಿಳಿಸಿತ್ತು.ಆದ್ರೆ ಒಂದು ದಿನದ ಮಟ್ಟಿಗೆ ಮಿಜೋರಾಂ ಮತಎಣಿಕೆ ಮುಂದೂಡಿಕೆ ಮಾಡಿದೆ.

ಈ ಬಗ್ಗೆ ಅಧಿಸೂಚನೆ ಹೊರಡಿಸಿರುವಂತ ಚುನಾವಣಾ ಆಯೋಗವು, 2023 ರ ಡಿಸೆಂಬರ್ 3 ರಂದು ಮಿಜೋರಾಂ ಜನರಿಗೆ ವಿಶೇಷ ಮಹತ್ವದ್ದಾಗಿರುವುದರಿಂದ ಎಣಿಕೆಯ ದಿನಾಂಕವನ್ನು 2023 ರ ಡಿಸೆಂಬರ್ 3 ರಿಂದ (ಭಾನುವಾರ) ಬೇರೆ ವಾರದ ದಿನಕ್ಕೆ ಬದಲಾಯಿಸುವಂತೆ ಕೋರಿ ಆಯೋಗವು ವಿವಿಧ ಭಾಗಗಳಿಂದ ಹಲವಾರು ಮನವಿಗಳನ್ನು ಸ್ವೀಕರಿಸಿದೆ. ಅದರಂತೆ ದಿನಾಂಕ ಬದಲಾವಣೆ ಮಾಡಲಾಗಿದೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!