ಶಾಸಕ ಹರೀಶ್ ಗೌಡಗೆ ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್‍ಮೇಲ್: ಖತರ್‌ನಾಕ್‌ ಗ್ಯಾಂಗ್‌ ಸೆರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮೈಸೂರಿನ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ ಗೌಡ ಸೇರಿದಂತೆ ಹಲವು ವಿಐಪಿಗಳಿಗೆ ಹನಿಟ್ರ್ಯಾಪ್‌ ಗಾಳ ಹಾಕಿದ್ದ ಖತರ್‌ನಾಕ್‌ ಗ್ಯಾಂಗನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮೈಸೂರು ಮೂಲದ ಸಂತೋಷ್ ಮತ್ತು ಪುಟ್ಟರಾಜು ಎಂದು ಗುರುತಿಸಲಾಗಿದೆ. ಗ್ಯಾಂಗ್‍ನಲ್ಲಿ ಓರ್ವ ಯುವತಿ ಸಹ ಭಾಗಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಪ್ರಭಾವಿಗಳನ್ನು ಸಂಪರ್ಕಿಸಿ ಅವರನ್ನು ಹಿಂಬಾಲಿಸುತ್ತಿದ್ದರು. ಬಳಿಕ ಅವರ ಮೊಬೈಲ್ ನಂಬರ್ ಪಡೆದು, ಅವರು ಉಳಿದುಕೊಂಡಿದ್ದ ಹೊಟೇಲ್ ನಲ್ಲಿ ಉಳಿದುಕೊಳ್ಳುತ್ತಿದ್ದರು. ಬಳಿಕ ವಿಐಪಿಗಳು ಖಾಲಿ ಮಾಡಿದ ರೂಮ್ ಬಾಡಿಗೆ ಪಡೆದು ಯುವತಿಯನ್ನು ಬಳಸಿಕೊಂಡು ಅದೇ ರೂಮ್‍ನಲ್ಲಿ ಹಿಡನ್ ಕ್ಯಾಮರ್ ಬಳಸಿ ವೀಡಿಯೋ ಚಿತ್ರಿಕರಿಸಿ ಪ್ರಭಾವಿಗಳಿಗೆ ತಮ್ಮದೇ ವೀಡಿಯೋ ಎಂದು ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಶಾಸಕ ಹರೀಶ್ ಗೌಡ ಅವರಿಗೂ ಆರೋಪಿಗಳು ಇದೇ ರೀತಿ ಬ್ಲಾಕ್‍ಮೇಲ್ ಮಾಡಿದ್ದರು. ಹರೀಶ್ ಗೌಡ ದೂರಿನ ಅನ್ವಯ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ವಿಶ್ವವಿದ್ಯಾಲಯ ಒಂದರ ಉಪಕುಲಪತಿಗಳಿಗೂ ಆರೋಪಿಗಳು ಬ್ಲಾಕ್‍ಮೇಲ್ ಮಾಡಿದ್ದರು ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!