ಹೊಸದಿಗಂತ ವರದಿ, ಮುಂಡಗೋಡ:
ತಾಲೂಕಿನ ಟಿಬೆಟಿಯನ್ ಕ್ಯಾಂಪ್‌ಗೆ ಆಗಮಿಸಿರುವ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಅವರನ್ನು ಶಾಸಕ ಶಿವರಾಮ ಹೆಬ್ಬಾರ್ ಅವರು ಬುಧವಾರ ಭೇಟಿಯಾಗಿ ಸನ್ಮಾನಿಸಿ ಗೌರವಿಸಿದರು.
ಶಾಸಕ ಶಿವರಾಮ ಹೆಬ್ಬಾರ ಅವರು ಟಿಬೆಟಿಯನ್ ಹಾಗೂ ತಾಲೂಕಿನ ಜನರ ಹೊಂದಾಣಿಕೆ ಬಗ್ಗೆ ಮುಖ್ಯಮಂತ್ರಿ ಪೇಮಾ ಖಂಡು ಅವರಿಗೆ ವಿವರಿಸಿದರು. ಪ್ರತಿನಿತ್ಯ ಮುಂಡಗೋಡದಿoದ ಎರಡು ರಿಂದ ಮೂರು ಸಾವಿರ ಕೆಲಸಗಾರರು ಟಿಬೆಟಿಯನ್ ಕಾಲೂನಿಗೆ ಕೆಲಸಕ್ಕೆ ಬರುತ್ತಾರೆ. ಇದರಿಂದ ಟಿಬೆಟಿಯನ್ನರು ಮತ್ತು ತಾಲೂಕಿನ ಜನರಲ್ಲಿ ಒಳ್ಳೆಯ ಬಾಂಧವ್ಯ ಇದೆ. ಈ ಕ್ಷೇತ್ರದ ಶಾಸಕನಾಗಿ ನಿಮ್ಮನ್ನು ಅಭಿನಂದಿಸುವೆ. ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರ ಅಧಿಕಾರ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು. ನಂತರ ಅ. ಪ್ರ. ಮುಖ್ಯಮಂತ್ರಿ ಪೇಮಾ ಖಂಡು ಮಾತನಾಡಿ ೨೦೧೮ ಸಾಲಿನಲ್ಲಿ ತಾಲೂಕಿನ ಟಿಬೆಟಿಯನ್ ಕಾಲೂನಿಗೆ ಭೇಟಿ ನೀಡಿದ್ದೇ ಮತ್ತೆ ಟಿಬೆಟಿಯನ್ ಕಾಲೂನಿಗೆ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದೇನೆ. ಇಲ್ಲಿಂದಲೇ ಗುರುವಾರ ಬೆಂಗಳೂರಿಗೆ ತೆರಳಲಿದೇನೆ ಎಂದರು. ಕೆಲ ಸಮಯ ಶಾಸಕ ಹೆಬ್ಬಾರ ಹಾಗೂ ಅವರ ಬೆಂಬಲಿಗರ ಜೊತೆ ತಮ್ಮ ರಾಜಕೀಯ ಬಗ್ಗೆ ಚರ್ಚೆಸಿದರು.ನಂತರ ಟಿಬೆಟಿಯನ್ನರ ಕುಂದು ಕೊರತೆಗಳ ಬಗ್ಗೆ ಅ.ಪ್ರ ಸಿಎಂ ಅವರು ಶಾಸಕರ ಗಮನಕ್ಕೆ ತಂದರು.
ಬಿಜೆಪಿ ಮಂಡಲಾಧ್ಯಕ್ಷರಾದ ನಾಗಭೂಷಣ ಹಾವಣಗಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಎಲ್.ಟಿ.ಪಾಟೀಲ್, ರವಿಗೌಡ ಪಾಟೀಲ್, ಮುಖಂಡರಾದ ಸಿದ್ದು ಹಡಪದ, ದೇವು ಪಾಟೀಲ, ಪಿ.ಜಿ. ತಂಗಚ್ಚನ ಸೇರಿದಂತೆ ಮುಂತಾದವರಿದ್ದರು.