ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಖಾಸಗ ಹೊಟೇಲ್‌ನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯಗೆ ಶಾಸಕರು ಸಚಿವರ ವಿರುದ್ಧವಾಗಿ ಪತ್ರ ಬರೆದಿದ್ದು, ಖುದ್ದು ಸಿಎಂ ತಮ್ಮ ಪಕ್ಷದಲ್ಲಿ ಇಷ್ಟೆಲ್ಲಾ ನಡೆಯುತ್ತಿದೆಯಾ ಎಂದು ಶಾಕ್ ಆಗಿದ್ದರು. ಈ ಬಗ್ಗೆ ಸಭೆ ಕರೆಯಿರಿ ಎಂದು ಮನವಿ ಮಾಡಿದ್ದರು. ಅಂತೆಯೇ ಸಿಎಂ ಸಭೆ ಕರೆದು ಒಂದೂವರೆ ತಾಸು ಮೀಟಿಂಗ್ ಮಾಡಿದ್ದಾರೆ.
ಸರ್ಕಾರದಲ್ಲಿ ನಾವೂ ಒಂದು ಭಾಗ ಆದರೆ ನಮಗೆ ಕಿಂಚಿತ್ತೂ ಬೆಲೆ ಇಲ್ಲ, ನಮ್ಮ ಮಾತುಗಳು ನಡೆಯೋದಿಲ್ಲ, ವರ್ಗಾವಣೆ ವಿಷಯವಾಗಿ ನಾವು ಕೊಟ್ಟ ಸಲಹೆಗಳನ್ನು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ, ಇನ್ನು ಕೆಲವು ಬಾರಿ ಸಚಿವ ಮನೆಗೇ ಹೋಗಿ ಮಾತನಾಡಲು ಯತ್ನಿಸಿದರೂ ಸ್ಪಂದನೆ ಇಲ್ಲ ಎಂದು ಶಾಸಕರು ದೂರಿದ್ದಾರೆ.
ಇದರ ಜತೆಗೆ ನಮ್ಮ ಮಾತುಗಳಿಗೆ ಬೆಲೆ ಕೊಡಬೇಕು, ಬೇಡಿಕೆಗಳಿಗೆ ಸ್ಪಂದಿಸಬೇಕು, ಕ್ಷೇತ್ರಾಭಿವೃದ್ಧಿಗೆ ಅನುದಾನ ಬೇಕು ಎನ್ನುವುದು ಶಾಸಕರ ಡಿಮ್ಯಾಂಡ್. ಇದಕ್ಕೆ ಸಿಎಂ ಸಿದ್ದರಾಮಯ್ಯ ಪರಿಹಾರ ಹುಡುಕಲು ಯತ್ನಿಸಿದ್ದು, ಸರ್ಕಾರ ಸ್ಥಾಪನೆಯಾಗಿ ವರ್ಷಗಳು ಕಳೆದಿಲ್ಲ. ಎರಡೇ ತಿಂಗಳಾಗಿದೆ. ನಿಮ್ಮ ಬೇಡಿಕೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ವರ್ಗಾವಣೆ ನಡೆಸುತ್ತೇವೆ. ಖುದ್ದು ನಾನೇ ನಿಮ್ಮ ಕ್ಷೇತ್ರಗಳ ಕುಂದುಕೊರತೆಗಳ ಬಗ್ಗೆ ಚರ್ಚಿಸ್ತೇನೆ, ಬೇಗ ಕೆಲಸ ಆಗುವಂತೆ ಮಾಡ್ತೇನೆ, ಮಾಧ್ಯಮಗಳ ಜತೆ ಯಾವ ಮಾತು ಬೇಡ, ಏನಿದ್ದರೂ ನನ್ನ ಬಳಿ ಬನ್ನಿ ಎಂದಿದ್ದಾರೆ.