ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಾರ್ಜ್‌ಗಿಟ್ಟು ಹೆಡ್‌ಫೋನ್‌ನಲ್ಲಿ ಮಾತನಾಡುವಾಗ ಮೊಬೈಲ್ ಸ್ಫೋಟಗೊಂಡು ಮಹಿಳೆ ಸಾವನ್ನಪ್ಪಿದ ಘಟನೆ ತಮಿಳುನಾಡಿನ ತಂಜಾವೂರಿನ ಪಾಪನಾಶಂನಲ್ಲಿ ನಡೆದಿದೆ.
ತಂಜಾವೂರಿನ ಪಾಪನಾಶಂ ಸಮೀಪದ ವಿಶಿಷ್ಟರಾಜಪುರಂ ಗ್ರಾಮದ ನಿವಾಸಿ ಪಿ ಗೋಕಿಲಾ (33) ಮೃತ ಮಹಿಳೆ.
ಗೋಕಿಲಾಳ ಪತಿ ಪ್ರಭಾಕರನ್ ಅನಾರೋಗ್ಯದ ಹಿನ್ನೆಲೆ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು. ಇದಾದ ಬಳಿಕ ಅಲ್ಲೇ ಗೋಕಿಲಾ ವಾಚ್ ಮತ್ತು ಸೆಲ್ ಫೋನ್ ರಿಪೇರಿ ಅಂಗಡಿ ನಡೆಸುತ್ತಿದ್ದಳು. ಗೋಕಿಲಾ ಮೊಬೈಲ್ ಚಾರ್ಜ್‌ಗಿಟ್ಟು ಇಯರ್‌ಫೋನ್‌ನಿಂದ ಮಾತನಾಡುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ, ಮೊಬೈಲ್ ಸ್ಫೋಟಗೊಂಡಿದ್ದು, ಇದರಿಂದ ಉಂಟಾದ ಬೆಂಕಿ ಇಡೀ ಅಂಗಡಿಯನ್ನು ಆವರಿಸಿದೆ. ಅಲ್ಲೇ ಇದ್ದ ಗೋಕಿಲಾ ಅವರಿಗೂ ತೀವ್ರ ಸುಟ್ಟ ಗಾಯಗಳಾಗಿವೆ.
ಕೂಡಲೇ ಅಕ್ಕಪಕ್ಕದವರು ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಗೋಕಿಲಾ ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿ ಕಬಿಸ್ಥಳಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.