Sunday, June 4, 2023

Latest Posts

SHOCKING | ಮೊಬೈಲ್‌ನಲ್ಲಿದ್ದ ಜವರಾಯ! ಮಕ್ಕಳ ಕೈಗೆ ಮೊಬೈಲ್ ಕೊಡೋರು ಈ ಸುದ್ದಿ ಓದಲೇಬೇಕು..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಗಿನ ಮಕ್ಕಳಿಗೆ ಮೊಬೈಲ್ ಬೇಕೇ ಬೇಕು, ಅದಿಲ್ಲದೆ ಊಟ ತಿಂಡಿ ಸೇರೋದಿಲ್ಲ, ಸಮಯ ಕಳೆಯೋಕಾಗೋದಿಲ್ಲ, ಸದಾ ಬೋರು, ನಿದ್ದೆ ಬರೋದಿಲ್ಲ!

8 ವರ್ಷದ ಪುಟಾಣಿಯ ಜೀವವನ್ನು ಮೊಬೈಲ್ ತೆಗೆದಿದೆ. ಕೇರಳದ ತ್ರಿಶೂರ್‌ನಲ್ಲಿ ಭೀಕರ ಅನಾಹುತ ಸಂಭವಿಸಿದ್ದು, ಗೇಮ್ಸ್ ಆಡುವಾಗ ಮೊಬೈಲ್ ಸ್ಫೋಟಗೊಂಡು ಮೂರನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.

ತ್ರಿಶೂರ್‌ನ ತಿರುವಿಲ್ವಾಮಲದಲ್ಲಿ ಚಾರ್ಜ್ ಆಗಿದ್ದ ಫೋನ್‌ನ್ನು ತೆಗೆದುಕೊಂಡು ಪುಟಾಣಿ ಗೇಮ್ ಆಡುತ್ತಿದ್ದಳು. ಇದ್ದಕ್ಕಿದ್ದಂತೆಯೇ ಫೋನ್ ಸ್ಫೋಟಗೊಂಡಿದ್ದು, ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಕಣ್ಣೆದುರೇ ಆಟವಾಡಿಕೊಂಡಿದ್ದ ಮಗುವನ್ನು ಕ್ಷಣಮಾತ್ರದಲ್ಲಿ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಯಾರೂ ಮಕ್ಕಳಿಗೆ ಫೋನ್ ಕೊಡಬೇಡಿ ಎಂದು ಪೋಷಕರು ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!