ಬಾಂಗ್ಲಾದೇಶ-ಮ್ಯಾನ್ಮಾರ್​​ ಕರಾವಳಿಗೆ ಮೋಚಾ ಎಂಟ್ರಿ: ಸಾವಿರಾರು ಜನರ ಸ್ಥಳಾಂತರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್​​ಗಳಲ್ಲಿ ಮೋಚಾ ಚಂಡಮಾರುತ ಅಬ್ಬರಿಸುತ್ತಿದೆ. ಕರಾವಳಿ ಪ್ರದೇಶದ ಜನರು ಬೇರೆಡೆ ಸ್ಥಳಾಂತರಗೊಂಡು, ಆಶ್ರಯ ಪಡೆಯಿರಿ ಎಂದು ಅಲ್ಲಿನ ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಮೇ 6ರಿಂದಲೇ ಮೋಚಾ ಚಂಡಮಾರುತದ ಹಾವಳಿ ಶುರುವಾಗಿದ್ದು, ಮೇ 12ರಂದು 2.30 ಗಂಟೆ ಸುಮಾರಿಗೆ ಆಗ್ನೇಯ ದಿಕ್ಕಿನ ಮಧ್ಯ ಬಂಗಾಳ ಕೊಲ್ಲಿಯ ಮೇಲೆ, ಪೋರ್ಟ್‌ಬ್ಲೇರ್‌ನ ಪಶ್ಚಿಮ-ವಾಯುವ್ಯಕ್ಕೆ 520 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿತ್ತು.

ಇಂದು ಮುಂಜಾನೆ ಹೊತ್ತಿಗೆ ಚಂಡ ಮಾರುತ ಮ್ಯಾನ್ಮಾರ್​​ನ ಕರಾವಳಿ ತೀರದ ರಖಿನ್ ರಾಜ್ಯಕ್ಕೆ ಕಾಲಿಟ್ಟಿದೆ. ಭಾನುವಾರ ಮಧ್ಯಾಹ್ನದ ನಂತರ ಸಿಟ್ವೆ ನಗರದ ಬಳಿ ಭೂಕುಸಿತ ಉಂಟಾಗಬಹುದು. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.
ಇಲ್ಲಿಯವರೆಗೆ 30 ಸಾವಿರ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಇನ್ನು ಬಾಂಗ್ಲಾದೇಶದಲ್ಲೂ ಕೂಡ ಕರಾವಳಿ ತೀರದಲ್ಲಿ ವಾತಾವರಣ ಹದಗೆಟ್ಟಿದೆ. ಚಂಡಮಾರುತದಿಂದ ತೀವ್ರ ಸಮಸ್ಯೆಯಾಗಬಹುದು ಎಂದು ಹಲವು ಮುನ್ನೆಚ್ಚರಿಕೆಗಳನ್ನು ವಹಿಸಲಾಗಿದೆ. ಒಣ ಆಹಾರಗಳನ್ನು ಸಂಗ್ರಹಿಸಿ ಇಡಲಾಗಿದೆ. ಹಲವು ಆಯಂಬುಲೆನ್ಸ್​ಗಳು, ವೈದ್ಯಕೀಯ ತಂಡಗಳು ಸಿದ್ಧವಾಗಿವೆ. ಆಶ್ರಯ ಕೇಂದ್ರಗಳನ್ನು ರಚಿಸಿ ಇಡಲಾಗಿದೆ. Cox’s Bazar ಸಿಟಿಯಲ್ಲಿ ಹೈಅಲರ್ಟ್ ಇದೆ. ಒಟ್ಟು ಎಂಟು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!