July 26, 2026
Sunday, July 26, 2026
spot_img

ಮಾಡೆಲ್‌ ತ್ವಿಷಾ ಶರ್ಮಾ ನಿಗೂಢ ಸಾವು ಕೇಸ್‌: ಸಿಬಿಐ ತನಿಖೆಗೆ ಸುಪ್ರೀಂ ಅಸ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಾಡೆಲ್‌ ಹಾಗೂ ನಟಿ ತ್ವಿಷಾ ಶರ್ಮಾ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಸುಪ್ರೀಂಕೋರ್ಟ್‌ ಹೇಳಿದೆ.

ಈ ಕೇಸ್‌ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಸುಮೋಟೊ ವಿಚಾರಣೆ ನಡೆಸಿ, ಸಿಬಿಐಗೆ ಹಸ್ತಾಂತರಿಸಲು ಸೂಚನೆ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್, ನ್ಯಾಯಮೂರ್ತಿ ಜೊಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ಮಾಡೆಲ್‌ ತ್ವಿಷಾ ಶರ್ಮಾ ಅನುಮಾನಾಸ್ಪದ ಸಾವು ಹಾಗೂ ವರಕ್ಷಿಣೆ ಕಿರುಕುಳದ ಬಗ್ಗೆ ಯಾವುದೇ ಸಾಕ್ಷ್ಯ ಹಾಗೂ ಹೇಳಿಕೆಗಳನ್ನು ಪ್ರಕಟಿಸದಂತೆ ಸುಪ್ರೀಂ ಸೂಚನೆ ನೀಡಿದೆ. 33 ವರ್ಷದ ಮಾಜಿ ‘ಮಿಸ್ ಪುಣೆʼ ಹಾಗೂ ನಟಿ ತ್ವಿಷಾ ಶರ್ಮಾ ತಮ್ಮ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮದುವೆಯಾಗಿ ಬರೀ ಐದು ತಿಂಗಳಲ್ಲಿ ಈ ರೀತಿ ಆಗಿರುವ ಕಾರಣ ಪೋಷಕರು ಇದು ಕೊಲೆ ಎಂದು ದೂರಿದ್ದರು. ತ್ವಿಷಾ ಪತಿ ಸಮರ್ಥ್‌ ಸಿಂಗ್‌ ಹಾಗೂ ತಾಯಿ ಗಿರಿಬಾಲಾ ಸಿಂಗ್‌ ಈ ಪ್ರಕರಣದ ಪ್ರಮುಖ ಆರೋಪಿಗಳು. ಸಮರ್ಥ್‌ ವಕೀಲರಾಗಿದ್ದು, ಗಿರಿಬಾಲಾ ನಿವೃತ್ತ ಜಿಲ್ಲಾ ನ್ಯಾಯಾಧೀಶರಾಗಿದ್ದಾರೆ. ಆರೋಪಿ ಕುಟುಂಬಕ್ಕೆ ಕಾನೂನು ಹಿನ್ನೆಲೆ ಇರುವ ಕಾರಣ ಇಲ್ಲಿ ಪಕ್ಷಪಾತ ನಡೆದಿದೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಕಾರಣದಿಂದ ಸುಪ್ರೀಂ ಕೋರ್ಟ್‌ ಸುಮೋಟೊ ಕೇಸ್‌ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !