ಲೋಕಸಭೆ ಸ್ಪೀಕರ್ ಆಯೋಜಿಸಿದ್ದ ಚಹಾ ಕೂಟದಲ್ಲಿ ಮೋದಿ, ರಾಗಾ ಭಾಗಿ: ಫೋಟೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಆಯೋಜಿಸಿದ್ದ ಅನೌಪಚಾರಿಕ ಚಹಾ ಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದರು.

ಉಭಯ ದೇಶಗಳ ನಾಯಕರು ಸೌಹಾರ್ದ ಶುಭಾಶಯ ವಿನಿಮಯ ಮಾಡಿಕೊಂಡರು. ಮಾನ್ಸೂನ್ ಅಧಿವೇಶನದ ಕಲಾಪ ಮುಂದೂಡಿದ ಸ್ವಲ್ಪ ಸಮಯದ ನಂತರ ಈ ಸಭೆ ನಡೆದಿದೆ.

ಸಂಸತ್ತಿನ ಸಂಕೀರ್ಣದಲ್ಲಿ ಚಹಾಕೂಟದಲ್ಲಿ, ಪ್ರಧಾನಿ ಮೋದಿ ಅವರು ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಸೋಫಾದಲ್ಲಿ ಕುಳಿತಿದ್ದರೆ, ರಾಹುಲ್ ಗಾಂಧಿ ಅವರು ಮೋದಿ ಅವರ ಬಲಕ್ಕೆ ಕುರ್ಚಿಯ ಮೇಲೆ ಕುಳಿತಿದ್ದಾರೆ.

ಸಭೆಯಲ್ಲಿ ಹಲವು ಸರ್ಕಾರ ಮತ್ತು ವಿರೋಧ ಪಕ್ಷಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಕಿರಣ್ ರಿಜಿಜು, ಪಿಯೂಷ್ ಗೋಯಲ್ ಮತ್ತು ಚಿರಾಗ್ ಪಾಸ್ವಾನ್, ಸುದೀಪ್ ಬಂಡೋಪಾಧ್ಯಾಯ ಸೇರಿದಂತೆ ವಿರೋಧ ಪಕ್ಷದ ಸಂಸದರು ಭಾಗವಹಿಸಿದ್ದರು. ಈ ಚಹಾ ಕೂಟದ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!