ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ದೇಶವೇ ಪ್ರಧಾನಿ ಮೋದಿ ಅವರ ಜನ್ಮದಿನವನ್ನು ಆಚರಣೆ ಮಾಡುತ್ತಿದೆ, ಇಂದು ಅಜ್ಮೇರ್ ಷರೀಫ್ ದರ್ಗಾದಿಂದ 4 ಸಾವಿರ ಕೆಜಿ ಸಸ್ಯಾಹಾರಿ ಊಟ ವಿತರಣೆ ಮಾಡಲಾಗುತ್ತಿದೆ.
ಐತಿಹಾಸಿಕ ಹಿನ್ನಲೆಯುಳ್ಳ ರಾಜಸ್ಥಾನದ ಅಜ್ಮೇರ್ ನಲ್ಲಿರುವ, ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಶ್ತಿಯ ದರ್ಗಾ ಆಡಳಿತ ಮಂಡಳಿಯೂ, ದಾಸೋಹದ ಮೂಲಕ, ಪ್ರಧಾನಿಗಳ ಜನ್ಮದಿನವನ್ನು ಆಚರಿಸಲು ಸಿದ್ದತೆ ಮಾಡಿಕೊಳ್ಳುತ್ತಿದೆ.
ಸೆ. 17ರಂದು ನಾಲ್ಕು ಸಾವಿರ ಕೆಜಿ ಸಸ್ಯಾಹಾರಿ ’ಲಂಗಾರ್’ ಭೋಜನವನ್ನು ಸಿದ್ದಪಡಿಸಿ ವಿತರಿಸಲು ನಿರ್ಧರಿಸಲಾಗಿದೆ ಎಂದು ದರ್ಗಾದ ಪ್ರಮುಖರು ಹೇಳಿದ್ದಾರೆ. ಮೋದಿಯವರ ಜನ್ಮದಿನದಂದು ಸಸ್ಯಾಹಾರಿ ಊಟವನ್ನು ವಿತರಿಸಲಾಗುತ್ತದೆ ಎಂದು ಗದ್ದಿ ನಶಿನ್ – ದರ್ಗಾ ಅಜ್ಮೇರ್ ಷರೀಫ್ ನ ಪ್ರಮುಖ ಸಯ್ಯದ್ ಅಫ್ಸಾನ್ ಚಿಸ್ತಿ ಹೇಳಿದ್ದಾರೆ.
ಪ್ರಧಾನಿಯವರ ಜನ್ಮದಿನದ ಪ್ರಯುಕ್ತ ವಿವಿಧ ಸೇವಾ ಕಾರ್ಯಗಳು ದೇಶಾದ್ಯಂತ ನಡೆಯುತ್ತದೆ. ನಾವು ನಾಲ್ಕು ಸಾವಿರ ಕೆಜಿ ಸಸ್ಯಾಹಾರಿ ಊಟವನ್ನು ತಯಾರಿಸಿ ಹಂಚುತ್ತೇವೆ. ಇದರಲ್ಲಿ, ಅನ್ನ ಮತ್ತು ತುಪ್ಪ ಮತ್ತು ಡ್ರೈಫ್ರುಟ್ಸ್ ಖಾದ್ಯಗಳೂ ಇರುತ್ತವೆ ಎಂದು ದರ್ಗಾದ ಪ್ರಮುಖರು ಹೇಳಿದ್ದಾರೆ.