ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಯಾನಾ ಭೇಟಿಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿನ ಅಧ್ಯಕ್ಷ ಇರ್ಫಾನ್ ಅಲಿ ಅವರಿಗೆ ನೀಡಿರುವ ಚನ್ನಪಟ್ಟಣ ಗೊಂಬೆಯ ಉಡುಗೊರೆ ಈಗ ಭಾರೀ ಸುದ್ದಿಯಾಗುತ್ತಿದೆ.
ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದ ಎಂಟು, ಜಮ್ಮು ಕಾಶ್ಮೀರದ ಐದು, ತಮಿಳುನಾಡು, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಲಡಾಖ್‌ನ ತಲಾ ಒಂದೊಂದು ಉಡುಗೊರೆಗಳನ್ನು ಮೋದಿ ತಾವು ಭೇಟಿಯಾದ ಗಣ್ಯರಿಗೆ ನೀಡಿದ್ದಾರೆ.
ತಮ್ಮ ಐದು ದಿನಗಳ ಕಾಲದ ಮೂರು ದೇಶಗಳ ಪ್ರವಾಸ ಮುಗಿಸಿ ವಾಪಸ್ ಆಗಿರುವ ಮೋದಿ, ಗಯಾನಾ, ಬೆಜ್ರಿಲ್ ಹಾಗೂ ನೈಜೀರಿಯಾದ ಪ್ರವಾಸದಲ್ಲಿ ಒಟ್ಟು ೩೧ ನಾಯಕರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭ ಅವರು ಅಲ್ಲಿನ ನಾಯಕರಿಗೆ ಭಾರತದ ಶ್ರೀಮಂತಿಕೆಯನ್ನು ಸಾರುವ ಉಡುಗೊರೆಗಳನ್ನು ನೀಡಿದ್ದಾರೆ. ದರ ಪೈಕಿ ಗಯಾನಾ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರ ಮಗ ಲಿಲನ್ ಅಲಿಗೆ ನೀಡಿರುವ ಕರ್ನಾಟಕದ ಚನ್ನಪಟ್ಟಣದ ಮರದ ಆಟಿಕೆ ರೈಲಿನ ಉಡುಗೊರೆ ಜಾಗತಿಕವಾಗಿ ಗಮನಸೆಳೆದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ