ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಅವರಿಗೆ ಭಾರತ ರತ್ನವನ್ನು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ.
ಪ್ರಧಾನಿ ಮೋದಿಯವರ ಘೋಷಣೆಯ ಕೆಲವೇ ನಿಮಿಷಗಳಲ್ಲಿ, ಆರ್‌ಎಲ್‌ಡಿ ಮುಖ್ಯಸ್ಥ ಮತ್ತು ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ ಜಯಂತ್ ಸಿಂಗ್ ಚೌಧರಿ ಅವರು “ದಿಲ್ ಜೀತ್ ಲಿಯಾ” (ಹೃದಯ ಗೆದ್ದಿದ್ದಾರೆ) ಎಂದು ಟ್ವೀಟ್ ಮಾಡಿದ್ದಾರೆ.
ಆರ್‌ಜೆಡಿ ಬಿಜೆಪಿ ಸೇರಲಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಅವರು, ಬಿಜೆಪಿ ಬೇಡ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ನೀವು ಬಿಜೆಪಿ-ಎನ್‌ಡಿಎ ಜೊತೆ ಕೈಜೋಡಿಸಲು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಜಯಂತ್ ಚೌಧರಿ, ಇಂದು ದೇಶಕ್ಕೆ ದೊಡ್ಡ ದಿನ ಮತ್ತು ನನಗೆ ಭಾವನಾತ್ಮಕ ಕ್ಷಣವಾಗಿದೆ. ನಾನು ರಾಷ್ಟ್ರಪತಿ, ಭಾರತ ಸರ್ಕಾರ ಮತ್ತು ವಿಶೇಷವಾಗಿ ಪ್ರಧಾನಿ ಮೋದಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.
ನೀವು ಬಿಜೆಪಿ-ಎನ್‌ಡಿಎ ಜೊತೆ ಕೈಜೋಡಿಸಲು ಸಿದ್ಧರಿದ್ದೀರಾ ಎಂದು ಕೇಳಿದಾಗ, ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ, “ಕೋಯಿ ಕಸರ್ ರೆಹತಿ ಹೈ? ಆಜ್ ಮೈನ್ ಕಿಸ್ ಮುಹ್ ಸೆ ಇನ್ಕಾರ್ ಕರೂನ್ ಆಪ್ಕೆ ಸವಲೋನ್ ಕೋ (ಯಾವುದಾದರೂ ಸಂದೇಹವಿದೆಯೇ? ಇಂದು ನಾನು ನಿಮ್ಮ ಪ್ರಶ್ನೆಯನ್ನು ಹೇಗೆ ನಿರಾಕರಿಸಲು ಸಾಧ್ಯ?) ಎಂದು ಕೇಳಿದ್ದಾರೆ.