ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನಲ್ಲಿರುವ ವಂತಾರಾ ವನ್ಯಜೀವಿ ಕೇಂದ್ರವನ್ನು ಉದ್ಘಾಟಿಸಿದ್ದಾರೆ. 1.5 ಲಕ್ಷಕ್ಕೂ ಹೆಚ್ಚು ಪ್ರಾಣಿಗಳಿಗೆ ಆಶ್ರಯ ನೀಡಿರುವ ವಂತಾರಾದಲ್ಲಿ ಅಳಿವಿನಂಚಿನಲ್ಲಿರೋ ಮತ್ತು ತೊಂದರೆಯಲ್ಲಿರೋ ಪ್ರಾಣಿಗಳ ರಕ್ಷಣೆ ನಡೆಯುತ್ತೆ.
ಇಲ್ಲಿ ಎಂಆರ್‌ಐ, ಸಿಟಿ ಸ್ಕ್ಯಾನ್ ಮತ್ತು ಐಸಿಯು ಇರೋ ಆಧುನಿಕ ಆಸ್ಪತ್ರೆ ಕೂಡ ಇದೆ. ಜೊತೆಗೆ ಪ್ರಾಣಿಗಳಿಗೆ ಅರಿವಳಿಕೆ, ಹೃದಯ ಸಮಸ್ಯೆ, ಮೂತ್ರಪಿಂಡ ಸಮಸ್ಯೆ, ಎಂಡೋಸ್ಕೋಪಿ, ದಂತ ಚಿಕಿತ್ಸೆ ಮತ್ತು ಒಳಾಂಗಗಳ ಚಿಕಿತ್ಸೆ ಸೇರಿದಂತೆ ಎಲ್ಲ ರೀತಿಯ ಆರೋಗ್ಯ ಸೇವೆಗಳನ್ನೂ ನೀಡಲಾಗುತ್ತೆ.
ಪ್ರಾಣಿಗಳ ಜೊತೆ ಸ್ವಲ್ಪ ಸಮಯ ಕಳೆದ ಮೋದಿ, ಅಪರೂಪದ ಚಿರತೆ ಮರಿ ಮತ್ತು ವಂತಾರದಲ್ಲೇ ಹುಟ್ಟಿದ್ದ ಬಿಳಿ ಸಿಂಹದ ಮರಿಗೆ ಆಹಾರ ನೀಡಿ ಆಟ ಆಡಿದರು. ನೀರಿನಲ್ಲಿ ಈಜುತ್ತಿದ್ದ ನೀರುಕುದುರೆ ಮತ್ತು ಮೊಸಳೆ ಜೊತೆ ಹಲವಾರು ಪ್ರಾಣಿಗಳನ್ನು ವೀಕ್ಷಿಸಿ ಅವುಗಳ ಜೊತೆ ಸಮಯ ಕಳೆದರು. ಜೊತೆಗೆ ಪ್ರಾಣಿಗಳಿಗೆ ವಂತಾರಾ ಕೇಂದ್ರ ನೀಡಿದ ಸೌಲಭ್ಯವನ್ನ ಶ್ಲಾಘಿಸಿದರು.