Wednesday, October 5, 2022

Latest Posts

ಕೆಂಪುಕೋಟೆ ಭಾಷಣದ ನಂತರ ಮಕ್ಕಳೊಂದಿಗೆ ಮೋದಿ ಸಂವಾದ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಐತಿಹಾಸಿಕ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ತಮ್ಮ ಭಾಷಣ್ದ ನಂತರ ಸ್ಥಳದಲ್ಲಿದ್ದ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ದೇಶದೆಲ್ಲೆಡೆಯಿಂದ ಯುವ ಎನ್‌ಸಿಸಿ ಕೆಡೆಟ್‌ಗಳನ್ನು ಆಹ್ವಾನಿಸಲಾಗಿತ್ತು. ಬಾರತ ನಕಾಶೆಯ ಆಕಾರವನ್ನು ಮಕ್ಕಳು ರೂಪಿಸಿದ್ದರು. ತಮ್ಮ ತಮ್ಮ ರಾಜ್ಯಗಳ ಸ್ಥಾನದಲ್ಲಿ ಅಲ್ಲಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಮಕ್ಕಳು ನಿಂತಿದ್ದರು. ಅವರ ಮಧ್ಯದಲ್ಲಿ ಮೋದಿಯವರು ಸಂಚರಿಸಿ ಅವರೊಂದಿಗೆ ಸಂವಾದ ನಡೆಸಿದರು. ಮಧ್ಯಪ್ರದೇಶ, ರಾಜಸ್ಥಾನ, ಮಣಿಪುರ, ಪಂಜಾಬ್, ನಾಗಾಲ್ಯಾಂಡ್, ಲಡಾಖ್, ಜಮ್ಮು ಮತ್ತು ಕಾಶ್ಮೀರ, ಇತ್ಯಾದಿ ವಿವಿಧ ರಾಜ್ಯಗಳಿಂದ ಸಾಂಸ್ಕೃತಿಕ ತಂಡಗಳು ಇದ್ದವು. ಅವರಲ್ಲಿ ಪಂಜಾಬ್‌ ನವರಿಗೆ ಭಾಂಗ್ರಾ ಪ್ರದರ್ಶಿಸಲು ಹೇಳಿದ ಮೋದಿಯವರು ಭಾಂಗ್ರಾವನ್ನು ನೋಡಿ ಸಂತಸಪಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!