ಅಮೆರಿಕ-ಭಾರತದ ಸಂಬಂಧಕ್ಕೆ ಮೋದಿ ಅತ್ಯುತ್ತಮ ನಾಯಕ: ಬಿಜೆಪಿ ಗೆಲುವಿಗೆ ಅಮೆರಿಕ ಗಾಯಕಿಯ ಅಭಿನಂದನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಚರಾಜ್ಯ ಚುನಾವಣೆಯಲ್ಲಿ (Elections) ಈಗಾಗಲೇ 4 ರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. 4 ರಾಜ್ಯಗಳ ಪೈಕಿ 3 ರಾಜ್ಯಗಳಲ್ಲಿ ಬಿಜೆಪಿ (BJP) ಭರ್ಜರಿ ಜಯಗಳಿಸಿದೆ.

ಬಿಜೆಪಿ ಗೆಲುವಿಗೆ ಎಲ್ಲೆಡೆಯಿಂದ ಪ್ರಧಾನಿ ಮೋದಿಗೆ ಅಭಿನಂದನೆಗಳು ಹರಿದು ಬರುತ್ತಿದ್ದು, ಅಮೆರಿಕದ ಗಾಯಕಿ, ನಟಿ ಮೇರಿ ಮಿಲ್‌ಬೆನ್ ಕೂಡ ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ.

ಭಾರತದಲ್ಲಿ ಇಂದಿನ ಚುನಾವಣಾ ಫಲಿತಾಂಶಗಳು ಹೊರಬಿದ್ದಿದ್ದು, ಬಿಜೆಪಿ ದೇಶದ ಹೃದಯ ಭಾಗದ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಗಳಲ್ಲಿ ಗೆದ್ದಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ 2024ರ ಪ್ರಬಲ ಗೆಲುವಿನ ಪೂರ್ವಭಾವಿಯಾಗಿದೆ. ಮೋದಿಯವರು ಭಾರತದ ಮೊದಲ ಅಭ್ಯರ್ಥಿ ಮತ್ತು ಅಮೆರಿಕ-ಭಾರತದ ಸಂಬಂಧಕ್ಕೆ ಅತ್ಯುತ್ತಮ ನಾಯಕರಾಗಿದ್ದಾರೆ ಎಂದು ಬರೆದಿದ್ದಾರೆ.

ಈ ಹಿಂದೆಯೂ ಮೇರಿ ಮಿಲ್‌ಬೆನ್ ಬಿಹಾರದ ಸಿಎಂ ನಿತೀಶ್ ಕುಮಾರ್ ಮಹಿಳೆಯರ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಾಗ ಅದನ್ನು ವಿರೋಧಿಸಿದ್ದರು. ಮಹಿಳೆಯರ ಪರವಾಗಿನ ನರೇಂದ್ರ ಮೋದಿಯವರ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದರು. ನಾನು ಭಾರತವನ್ನು ಪ್ರೀತಿಸುತ್ತೇನೆ. ಪ್ರಧಾನಿ ಮೋದಿ ಭಾರತೀಯ ನಾಗರಿಕರ ಪ್ರಗತಿಯ ಅತ್ಯತ್ತಮ ನಾಯಕ. ಅವರು ಯುಎಸ್‌ಗೆ ಉತ್ತಮ ನಾಯಕರಾಗಿದ್ದಾರೆ. ಅವರು ಮಹಿಳೆಯರ ಪರವಾಗಿ ನಿಂತಿದ್ದಾರೆ ಎಂದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!