ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣಾ ಪ್ರಚಾರದ ಭಾಗಿವಾಗಿ ರಾಜ್ಯದಲ್ಲಿ ಮತಪ್ರಚಾರ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಇಂದು ಉತ್ತರಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ಆಯೋಜಿಸಲಾಗಿರುವ ಬಿಜೆಪಿ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದ್ದು, ಈ ವೇಳೆ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಭೇಟಿಯಾದರು.
ಸಮಾರಂಭಕ್ಕೂ ಮೊದಲು ಪದ್ಮ ಪ್ರಶಸ್ತಿ ಪುರಸ್ಕೃತರಾದ ತುಳಸಿ ಗೌಡ ಮತ್ತು ಸುಕ್ರಿ ಬೊಮ್ಮಗೌಡ ಅವರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಗೌರವಪೂರಕ ನಮನ ಸಲ್ಲಿಸಿದರು. ಹಾಲಕ್ಕಿ ಸಮುದಾಯಕ್ಕೆ ಸೇರಿದ ಈ ಮಹಾನ್ ಮಹಿಳೆಯರ ಸಾಧನೆಗೆ(ಪರಿಸರ ಕಾಳಜಿ, ಜಾನಪದ ಗಾಯನ)ಕ್ಕೆ ಮೆಚ್ಚಿ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಯನ್ನು ಭಾರತ ಸರ್ಕಾರ ನೀಡಿ ಗೌರವಿಸಿತ್ತು.
Prime Minister Narendra Modi meets Tulsi Gowda and Sukri Bommagowda, Padma award recipients from Karnataka, at Ankola in Uttara Kannada district pic.twitter.com/vPfOF2hSK4
— ANI (@ANI) May 3, 2023