ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ದಿನಗಳ ಭೇಟಿಗೆ ಇಸ್ರೇಲ್‌ಗೆ ಆಗಮಿಸಿದ ಮೋದಿ ಅವರಿಗೆ ಖುದ್ದು ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಮಾನ ನಿಲ್ದಾಣಕ್ಕೇ ಆಗಮಿಸಿ ಆತ್ಮೀಯವಾಗಿ ಸ್ವಾಗತ ನೀಡಿದರು.
ಬಳಿಕ ಉಭಯ ನಾಯಕರು ಇಸ್ರೇಲ್ ಸಂಸತ್ ಪ್ರವೇಶಿಸಿದ್ದು, ಈ ವೇಳೆ “ಮೋದಿ, ಮೋದಿ” ಎಂಬ ಘೋಷಣೆಗಳು ಕೇಳಿಬಂದವು. “ನಮಸ್ತೆ” ಯೊಂದಿಗೆ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಈ ವೇಳೆ ಸಂಸತ್ನ ಎಲ್ಲ ಸದಸ್ಯರೂ ಎದ್ದುನಿಂತು ಕೈ ಜೋಡಿಸಿ ನಮಸ್ಕಾರ ಮಾಡಿ ಮೋದಿಯನ್ನು ಬರಮಾಡಿಕೊಂಡರು.
ಇಸ್ರೇಲ್ ಸಂಸತ್ ಅನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುವ ಮುನ್ನ ಮಾತನಾಡಿದ ನೆತನ್ಯಾಹು ,ಪ್ರಧಾನಿ ಮೋದಿಯನ್ನು ತಮ್ಮ ಸಹೋದರನಿದ್ದಂತೆ ಎಂದು ಬಣ್ಣಿಸಿದ್ದಾರೆ. ಈ ಮೂಲಕ ಭಾರತ ಮತ್ತು ಇಸ್ರೇಲ್ ನಡುವಿನ ಗೆಳೆತನ, ಬಾಂಧವ್ಯವನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದ್ದಾರೆ.
ಇದು ನಮಗೆ ಹೆಮ್ಮೆಯ ಕ್ಷಣ. ಪ್ರಧಾನಿ ಮೋದಿ ನನ್ನ ಉತ್ತಮ ಸ್ನೇಹಿತ. ನನ್ನ ಗೆಳೆಯ ಎನ್ನುವುದಕ್ಕಿಂತಲೂ ಸಹೋದರ ಎಂದರೂ ತಪ್ಪಾಗಲಾರದು. ಭಾರತದೊಂದಿಗಿನ ವ್ಯಾಪಾರ ದ್ವಿಗುಣಗೊಂಡಿದೆ ಮತ್ತು ಸಹಕಾರ 4 ಪಟ್ಟು ಹೆಚ್ಚಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ.



