ಮೋದಿ ಪ್ರಮಾಣ ವಚನ: ಬಳ್ಳಾರಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

ಹೊಸದಿಗಂತ ವರದಿ,ಬಳ್ಳಾರಿ:

ವಿಶ್ವ ನಾಯಕ, ನರೇಂದ್ರ ಮೋದಿ ಅವರು, 3ನೇ ಬಾರಿ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇಲ್ಲಿನ ಬಿಜೆಪಿ ಕಾರ್ಯಕರ್ತರು ಭಾನುವಾರ ನಗರದ ರಾಯಲ್ ವೃತ್ತದ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಸಂಭ್ರಮಾಚರಣೆ ನಡೆಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ನೂರಾರು ಕಾರ್ಯಕರ್ತರು, ಮುಖಂಡರು ಭಾಗವಹಿಸಿ, ಬಿಜೆಪಿ ಹಾಗೂ ಮೋದಿ ಅವರ ಪರ ಜಯ ಘೋಷಣೆಗಳನ್ನು ಮೊಳಗಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ ಅವರು ಮಾತನಾಡಿ, ವಿಶ್ವ ಗುರು ನರೇಂದ್ರ ಮೋದಿ ಅವರು 3ನೇ ಬಾರಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಸಂತಸಮೂಡಿಸಿದೆ. ಬಳ್ಳಾರಿಯ ಜನರು ಸಿಹಿ ಹಂಚಿ ಸಂಭ್ರಮಿಸಿ ಹಬ್ಬದ ದಿನವನ್ನಾಗಿ ಆಚರಿಸಿದ್ದಾರೆ, ಈ ದಿನ ಇತಿಹಾಸದ ಪುಟದಲ್ಲಿ ಬರೆದಿಡುವ ದಿನವಾಗಿದೆ, ಇದೊಂದು ಐತಿಹಾಸಿಕ ದಿನವಾಗಿದೆ, ಬಳ್ಳಾರಿಯ ಜನತೆ ಪರವಾಗಿ ಮೋದಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವೆ. ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶ್ವವನ್ನು ಗೆಲ್ಲುವ ಶಕ್ತಿಯನ್ನು, ಸಾಮರ್ಥ್ಯವನ್ನು ನೀಡಲಿ, ಮಾದರಿ ರೀತಿ ಆಡಳಿತ ನಡೆಸಿ ಮೋದಿ ಅವರು ಇನ್ನಷ್ಟು ಮಾದರಿಯಾಗಲಿ, ಅವರ ಜನಪ್ರಿಯತೆ ಹೆಚ್ಚಾಗಲಿ ಎಂದರು.

ಬಿಜೆಪಿ ರಾಜ್ಯ ಸಮಿತಿ ಸದಸ್ಯೆ, ನ್ಯಾಯವಾದಿ ವಿಜಯಲಕ್ಷ್ಮಿ ಅವರು ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, 3ನೇ ಬಾರಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ದಾಖಲೆ ಸೃಷ್ಟಿಸಿದ್ದಾರೆ. ಭಾರತವನ್ನು ವಿಶ್ವವಾಗುರುವನ್ನಾಗಿ ಮಾಡಲಿ, ದೇವರು ಮೋದಿ ಅವರಿಗೆ ಆರೋಗ್ಯ, ಆವಿಷ್ಯ ನೀಡಿ, ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಹಾರೈಸಿದರು. ಇದಕ್ಕೂ ಮುನ್ನ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ವೆಂಕಟೇಶ್ವರ, ಡಾ.ಅರುಣಾ ಲಕ್ಷ್ಮಿ, ಒಬಿಸಿ ಘಟಕದ ಜಿಲ್ಲಾಧ್ಯಕ್ಷ ರಾಘವೇಂದ್ರ ಯಾದವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೇಶ್ ಉಪ್ಪಾರ್, ಮಹಿಳಾ ಘಟಕದ ಸುಮಾ, ಸುಗುಣ, ಮಹಾನಗರ ಪಾಲಿಕೆ ಸದಸ್ಯ ಹನುಮಂತ,ಸಾಧನ ಹಿರೇಮಠ್, ಪ್ರಕಾಶ್, ಪುಷ್ಪಲತಾ, ರಾಮಂಜಿನೀ, ಓo ಪ್ರಕಾಶ್, ಸೋಮನಗೌಡ, ರಾಜೇಶ್ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!