July 4, 2026
Saturday, July 4, 2026
spot_img

ರಸ್ತೆ ಬದಿ ಅಂಗಡಿಯಿಂದ ಝಲ್ಮುರಿ ಸವಿದ ಮೋದಿ: ಇದು ಪೂರ್ವ ನಿಯೋಜಿತ ನಾಟಕ ಎಂದ ದೀದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ಮೋದಿ ಅವರು ಜಾರ್ಗ್ರಾಮ್‌ ಎಂಬಲ್ಲಿ ದಿಢೀರ್ ಕಾರು ನಿಲ್ಲಿಸಿ ರಸ್ತೆಬದಿಯ ಅಂಗಡಿಯಿಂದ ಝಲ್ಮುರಿ ಸವಿದಿದ್ದು, ಇದೀಗ ಈ ಕ್ಷಣವನ್ನುಸಿಎಂ ಮಮತಾ ಬ್ಯಾನರ್ಜಿ ಪೂರ್ವ ನಿಯೋಜಿತ ನಾಟಕ ಎಂದು ಕರೆದಿದ್ದಾರೆ.

ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ, ಪ್ರಧಾನಿ ಕೇವಲ ಮತದಾರರನ್ನು ಸೆಳೆಯಲು ನಾಟಕವಾಡಿದ್ದು, ಅವರು ಎಲ್ಲಿ ನಿಲ್ಲುತ್ತಾರೋ ಅಲ್ಲಿ ಕ್ಯಾಮರಾಗಳು ಸಿದ್ದ ಇರಲು ಹೇಗೆ ಸಾಧ್ಯ? ಇನ್ನು ಝಲ್ಮುರಿ ಗೆ ಹತ್ತು ರೂಪಾಯಿ ಅಂದಾಗ ತಕ್ಷಣ ಜೇಬಿನಲ್ಲಿ ಸಿಗಲು ಸಾಧ್ಯವೇ? ಇದೆಲ್ಲವೂ ಕೇವಲ ನಾಟಕ ಎಂದು ಸಿಎಂ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

ಭಾನುವಾರ ಪ್ರಧಾನಿ ಮೋದಿ ಅವರು ಪ್ರಚಾರದಿಂದ ವಾಪಸಾಗುತ್ತಿದ್ದ ವೇಳೆ ಜಾರ್ಗ್ರಾಮ್‌ನಲ್ಲಿ ರಸ್ತೆಬದಿಯ ಸಣ್ಣ ಅಂಗಡಿಯೊಂದಕ್ಕೆ ಭೇಟಿ ಬಂಗಾಳದ ಅತ್ಯಂತ ಜನಪ್ರಿಯ ತಿಂಡಿ ಝಲ್ಮುರಿ ಸವಿದಿದ್ದಾರೆ. ಈ ವೇಳೆ ಅಲ್ಲಿ ಸ್ಥಳೀಯರಿಗೂ ಝಲ್ಮುರಿ ಹಂಚಿದ ಮೋದಿ, ಎಲ್ಲರ ಜೊತೆ ಪ್ರೀತಿಯಿಂದ ಮಾತನಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !