September 16, 2026
Wednesday, September 16, 2026
spot_img

ವಿಜಯ್-ಸಂಗೀತಾ ಡಿವೋರ್ಸ್ ಕೇಸ್‌ಗೆ ಟ್ವಿಸ್ಟ್: ಮುಂದಿನ ವಿಚಾರಣೆಗೆ ಹಾಜರಾಗಲು ಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್

ತಮಿಳುನಾಡಿನ ಚುನಾವಣಾ ಅಖಾಡದಲ್ಲಿ ಭರ್ಜರಿ ಮತಬೇಟೆ ನಡೆಸುತ್ತಿರುವ ನಟ ವಿಜಯ್ ಗೆ ಮತ್ತೊಂದು ತಲೆನೋವು ಶುರುವಾಗಿದೆ. ರಾಜಕೀಯದಲ್ಲಿ ಮೊದಲ ಯಶಸ್ಸು ಹುಡುಕುತ್ತಾ ಹೊರಟ ದಳಪತಿಗೆ ವೈಯಕ್ತಿಕ ಜೀವನದಲ್ಲಿ ಸಮಸ್ಯೆ ಎದುರಾಗಿದ್ದು, ಪತ್ನಿ ಸಂಗೀತಾ ಸಲ್ಲಿಸಿರುವ ವಿಚ್ಛೇದನ ಅರ್ಜಿಯ ವಿಚಾರಣೆ ಕೈಗೆತ್ತಿಗೊಂಡ ಚೆಂಗಲ್ಪಟ್ಟುನಲ್ಲಿರುವ ಕುಟುಂಬ ಕಲ್ಯಾಣ ನ್ಯಾಯಾಲಯ ಖುದ್ದು ಹಾಜರಾಗುವಂತೆ ದಂಪತಿಗೆ ಸಮನ್ಸ್ ಜಾರಿ ಮಾಡಿದೆ.

ಇಂದು ವಿಚಾರಣೆ ವೇಳೆ ಇಬ್ಬರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕಿತ್ತು. ಆದರೆ ಜೂನ್‌ನಲ್ಲಿ ಹಾಜರಾಗುವ ಸಾಧ್ಯತೆ ಕುರಿತು ವಕೀಲರು ಮಾಹಿತಿ ನೀಡಿದ ಹಿನ್ನೆಲೆ ಕೋರ್ಟ್, ವಿಚಾರಣೆಯನ್ನು ಜೂನ್ 15ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ .

2021 ರ ಬಳಿಕ ಪತಿ ವಿಜಯ್​ ನಟಿಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿರುವ ಅನುಮಾನದಿಂದಾಗಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ಕೈಗೆತ್ತಿಗೊಂಡ ಕೋರ್ಟ್,ಏಪ್ರಿಲ್​ 20 ರಂದು ನಡೆಸುವುದಾಗಿ ಹೇಳಿತ್ತು. ಆದ್ರೆ ಇದೀಗ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯಿರುವ ಕಾರಣ ವಿಚಾರಣೆಯನ್ನು ಮುಂದೂಡಿದೆ.

1999ರಲ್ಲಿ ಚೆನ್ನೈನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದ ಈ ಜೋಡಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !